ಮುಂಬೈಗೆ ಪಾಂಡ್ಯ, ಆರ್‌ಸಿಬಿ ಸೇರಿದ ಗ್ರೀನ್‌

Advertisement

ಬೆಂಗಳೂರು: ಹಲವು ದಿನಗಳಿಂದ ಹಾರ್ದಿಕ್‌ ಪಾಂಡ್ಯ ವಿಚಾರದಲ್ಲಿ ಎದ್ದಿದ್ದ ವದಂತಿಗೆ ಇಂದು ತೆರೆ ಬಿದ್ದಿದೆ. ಹಾರ್ದಿಕ್‌ ಮತ್ತೆ ಮುಂಬೈ ಇಂಡಿಯನ್ಸ್‌ ತಂಡವನ್ನು ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಮುಂಬೈ ತಂಡದಲ್ಲಿದ್ದ ಆಸ್ಟ್ರೇಲಿಯಾ ತಂಡದ ಸ್ಟಾರ್ ಆಲ್​ರೌಂಡರ್ ಕ್ಯಾಮರೂನ್ ಗ್ರೀನ್ ಆರ್​ಸಿಬಿ ಪಾಲಾಗಿದ್ದಾರೆ. ಎರಡು ವರ್ಷಗಳ ಕಾಲ ಗುಜರಾತ್ ಟೈಟಾನ್ಸ್ ತಂಡದ ನಾಯಕನಾಗಿದ್ದ ಹಾರ್ದಿಕ್ ಪಾಂಡ್ಯ ಜವಾಬ್ದಾರಿಯನ್ನ ಶುಭ್ಮನ್‌ ಗಿಲ್‌ಗೆ ವಹಿಸಲಾಗಿದೆ.