ಮುಂಬರುವ ಬಜೆಟ್‌ನಲ್ಲಿ ನೇಕಾರರಿಗೆ ಇನ್ನಷ್ಟು ಬೆಂಬಲ: ಬೊಮ್ಮಾಯಿ

Advertisement

ಬೆಂಗಳೂರು: ಮುಂಬರುವ ಬಜೆಟ್‌ನಲ್ಲಿ ನೇಕಾರರಿಗೆ ಇನ್ನಷ್ಟು ಬೆಂಬಲ ನೀಡಲು, ಕಚ್ಚಾ ವಸ್ತುವಿನಿಂದ ಹಿಡಿದು, ತಂತ್ರಜ್ಞಾನ ಅಭಿವೃದ್ಧಿಯವರಿಗೆ ಸಹಾಯ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಕರ್ನಾಟಕ ರಾಜ್ಯ ತೊಗಟವೀರ ಕ್ಷತ್ರಿಯ ನೇಕಾರ ಸಂಘದ ವತಿಯಿಂದ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿರುವ ಸಂಘದ “ಅಮೃತ ಮಹೋತ್ಸವ 2023” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾಯಕ, ಕರ್ತವ್ಯನಿಷ್ಠ, ಸಮಾಜಕ್ಕೆ ಮಾರ್ಯಾದೆ ತುಂಬುವ ಸಮಾಜ ನೇಕಾರರ ಸಮಾಜ. ಮಾನವನಿಗೆ ಗೌರವ ಕೊಡುವ ನೇಕಾರ, ಅನ್ನ ನೀಡುವ ರೈತ ಕುಲ ಅನಾದಿ ಕಾಲದಿಂದ ಮನುಷ್ಯನನ್ನು ರಕ್ಷಿಸಿಕೊಂಡು ಬಂದಿವೆ.
ನೇಕಾರರ ಮೂಲ ವೃತ್ತಿ ಉಳಿಯಬೇಕು ಬೆಳೆಯಬೇಕು. ಅದರ ಜೊತೆಗೆ ನೇಕಾರರು ಬೆಳೆಯಬೇಕು ಅವರ ಮಕ್ಕಳು ಬೇರೆ ಬೇರೆ ವೃತ್ತಿಗೆ ಹೋಗಬೇಕು.
1990ರ ನಂತರ ಜಾಗತಿಕರಣ ಆದ ಮೇಲೆ ನೇಕಾರರ ವೃತ್ತಿಗೆ ಹೊಡೆತ ಬಿದ್ದಿದೆ. ಅದಕ್ಕೆ ನೇಕಾರರು ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ದೊರೆತಾಗ ಮಾತ್ರ ನೇಕಾರರು ಬೆಳೆಯಲು ಸಾಧ್ಯ. ಪಾಲಿಯಸ್ಟರ್ ಬಟ್ಟೆಗಳ ಉತ್ಪಾದನೆಯಾಗುತ್ತಿದ್ದಂತೆ ಮೂಲ ನೇಕಾರಿಕೆಗೆ ತೊಂದರೆಯಾಗಿದೆ. ಸರ್ಕಾರಗಳು ಹಲವಾರು ಸಂದರ್ಭಗಳಲ್ಲಿ ಸಹಾಯ ಮಾಡಿವೆ. ಶಾಶ್ವತವಾಗಿ ಸಹಾಯವಾಗಲು ನೇಕಾರರ ಬಟ್ಟೆಗಳಿಗೆ ನಿರಂತರವಾಗಿ ಮಾರುಕಟ್ಟೆ ದೊರೆಯಬೇಕು ಎಂದರು.