ಮುಂದವರಿದ ಭಾರಿ ಮಳೆ: ಮನೆ‌ ಕುಸಿದು ವೃದ್ಧೆ ಸಾವು

Advertisement

ಬಾಗಲಕೋಟೆ: ನಗರದ ಕಿಲ್ಲಾಭಾಗದಲ್ಲಿ‌ ಮನೆ ಕುಸಿದ ಪರಿಣಾಮ ವೃದ್ಧ ಮೃತಪಟ್ಟರುವ ಘಟನೆ ನಡೆದಿದೆ.‌ಮನೆಯಲ್ಲಿದ್ದ ನಾಲ್ವರ ‌ಪೈಕಿ‌ ಮೂವರು ಪಾರಾಗಿದ್ದು, ಗೋಡೆ ಕುಸಿತದಿಂದ ಮಹಿಳೆ ಸ್ಥಳದಲ್ಲೆ ಜೀವ ಬಿಟ್ಟಿದ್ದಾಳೆ.

ಮೃತ ದುರ್ದೈವಿಯ‌ನ್ನು ಸುಧಾಬಾಯಿ‌ ಕಾವೇರಿ(೮೦) ಎಂದು ಗುರುತಿಸಲಾಗಿದೆ. ಬೆಳಗ್ಗೆ ೫ ಗಂಟೆ ವೇಳೆಗೆ ಘಟನೆ ನಡೆದಿದ್ದು, ಕಟ್ಟಡದ ಅವಶೇಷಗಳಲ್ಲಿ ಸಿಲುಕಿದ್ದ ಮೃತದೇಹವನ್ನು ಅಗ್ನಿ ಶಾಮಕದಳದ ಸಿಬ್ಬಂದಿ‌ ಕಾರ್ಯಾಚರಣೆ ನಡೆಸಿ‌ ಹೊರತೆಗೆದಿದ್ದಾರೆ.

ಘಟನೆ‌‌ ಕುರಿತು ಮಾಹಿತಿ ನೀಡಿದ ಜಿಲ್ಲಾ ಅಗ್ನಿಶಾಮಕದಳದ ಅಧಿಕಾರಿ ‌ಮಲ್ಲಿಕಾರ್ಜುನಪ್ಪ, ಬೆಳಗ್ಗೆ ೫.೧೫ಕ್ಕೆ ಕರೆ ಬಂದ ತಕ್ಷಣ ಹೊರಟು ಬಂದು ಕಾರ್ಯಾಚರಣೆ ಆರಂಭಿಸಿದ್ದೇವೆ.‌ಮನೆಯಲ್ಲಿದ್ದ‌ಮೂವರು ಹೊರ ಬಂದಿದ್ದರು. ಭಾರೀ ಪ್ರಮಾಣದಲ್ಲಿ ಅವಶೇಷ ವೃದ್ಧೆ ಮೇಲೆ‌ಬಿದ್ದಿತ್ತು, ಮನೆ ಪ್ರವೇಶವೂ ಕಷ್ಟ ಎಂಬಷ್ಟರ ಮಟ್ಟಿಗೆ ಕುಸಿತವಾಗಿತ್ತು, ಕಾರ್ಯಾಚರಣೆ ನಡೆಸಿ‌ ಮೃತ ದೇಹ ಹೊರತೆಗೆಯಲಾಗಿದೆ ಎಂದು ತಿಳಿಸಿದರು.

ತಹಶಿಲ್ದಾರ ವಿಜಯಕುಮಾರ್ ‌ಪಾಟೀಲ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬುಧವಾರ ದಿನವಿಡೀ ಭಾರೀ‌ ಮಳೆ ಬಿದ್ದಿದ್ದು,‌ರಾತ್ರಿಯೂ ಉಗ್ರಸ್ವರೂಪಿಯಾಗಿ ಸುರಿಯುತ್ತಿದೆ. ಭಾರೀ ಗುಡುಗು,‌ಮಿಂಚು‌‌ ಸಹಿತ‌ ಮಳೆ ಮುಂದವರಿದಿದೆ.