ಮೀಸಲಾತಿ ಹೆಚ್ಚಳ; ಮುಖ್ಯಮಂತ್ರಿಯಿಂದ ಸೂಕ್ತ ನಿರ್ಧಾರ: ಬಿಎಸ್‌ವೈ

BSY
Advertisement

ಮಂಗಳೂರು: ಈಗ ಮೀಸಲಾತಿ ಹೆಚ್ಚಳ ಎಲ್ಲರೂ ಕೇಳುತ್ತಿದ್ದಾರೆ. ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡುವ ಬಗ್ಗೆ ಮುಖ್ಯಮಂತ್ರಿಗಳು ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಇಂದು ನಗರಕ್ಕೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಸೆಂಬ್ಲಿ ಚುನಾವಣೆಗೆ ಬಾದಾಮಿಯಿಂದ ಯಾಕೆ ಸ್ಪರ್ಧಿಸುತ್ತಿಲ್ಲ, ಅವರ ಬಗ್ಗೆ ಇದ್ದ ವಿಶ್ವಾಸ, ನಂಬಿಕೆಯನ್ನು ಅಲ್ಲಿನ ಜನ ಕಳೆದುಕೊಂಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ದರಾಮಯ್ಯ ಅವರು ಕ್ಷೇತ್ರ ಹುಡುಕುತ್ತಿದ್ದಾರೆ, ಯಾವುದೂ ಸಿಕ್ಕಿಲ್ಲ. ಹಾಗಾಗಿ ಈಗ ಕೋಲಾರ ಎಂದು ಹೇಳುತ್ತಿದ್ದಾರೆ. ಕೋಲಾರದಿಂದ ಸ್ಪರ್ಧಿಸಿದರೆ ಅಲ್ಲಿದ್ದವರು ಇನ್ನೊಂದು ಕ್ಷೇತ್ರ ಹುಡುಕಬೇಕಾಗುತ್ತದೆ. ಮೈಸೂರು, ಬಾದಾಮಿ ಬಿಟ್ಟು ಈಗ ಮತ್ತೊಂದು ಕ್ಷೇತ್ರ ಹುಡುಕುತ್ತಿದ್ದಾರೆ. ಹಾಗಾದರೆ ಬಾದಾಮಿಯಿಂದ ಯಾಕೆ ನಿಲ್ಲುವುದಿಲ್ಲ? ಇದರಿಂದಲೇ ಗೊತ್ತಾಗುತ್ತದೆ ಸಿದ್ದರಾಮಯ್ಯ ಅವರ ಜನಪ್ರಿಯತೆ ಎಷ್ಟಿದೆ ಎಂಬುದು ಎಂದರು.