ದಾವಣಗೆರೆ: ಪಂಚಮಸಾಲಿ ಮತ್ತು ಒಕ್ಕಲಿಗರಿಗೆ ಮೀಸಲಾತಿ ಘೋಷಣೆ ಮಾಡಿರುವುದೆಲ್ಲಾ ಚುನಾವಣೆ ಗಿಮಿಕ್ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ಸರ್ಕಾರಕ್ಕೆ ಕುಟುಕಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿ ಬಗ್ಗೆ ಸ್ವತಃ ಬಿಜೆಪಿ ಸರ್ಕಾರಕ್ಕೂ ಗೊಂದಲವಿದೆ. ಮೀಸಲಾತಿ ಇಷ್ಟೆ ಪ್ರತಿಶತ ನೀಡುತ್ತೇವೆ ಎಂದು ಎಲ್ಲೂ ಹೇಳಿಲ್ಲ. ಸಂವಿಧಾನ ಬದ್ಧವಾಗಿ ಶೇ.50 ರಷ್ಟು ಮೀಸಲಾತಿ ಮೀರಬಾರದು. ಈಗಾಗಲೇ ಇಡಬ್ಲ್ಯೂಎಸ್ ಗೆ ಕೇಂದ್ರ ಸರ್ಕಾರದಿಂದ ಶೇ.10 ನೀಡಿದ್ದಾರೆ, ಪರಿಶಿಷ್ಟರಿಗೆ ಶೇ.6 ರಷ್ಟು ಮೀಸಲಾತಿಗೆ ಸುಗ್ರೀವಾಜ್ಞೆ ಹೊರಡಿಸಿದ್ದಾರೆ. ಅಲ್ಲಿಗೆ ಒಟ್ಟು 59.5 ಆಗಿದೆ. ಹಾಗಿದ್ದರೆ ಈ ಸಮುದಾಯಕ್ಕೆ ಮೀಸಲಾತಿ ಎಲ್ಲಿಂದ ಕೊಡುತ್ತಾರೆ ಎಂದು ಪ್ರಶ್ನಿಸಿದರು.
ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಬಂದು ಮಾಯಾ ಮಂತ್ರ ಮಾಡ್ತಾರ? ಅವರೇನು ಮಂತ್ರಗಾರರಾ ? ಅವರು ಪಶ್ಚಿಮ ಬಂಗಾಳ ಮತ್ತು ಹಿಮಾಚಲ ಪ್ರದೇಶದ ಚುನಾವಣೆಯಲ್ಲಿ ಹೋಗಿ ಅಲ್ಲಿ ಉಳಿದಿದ್ದರು ಏನಾಯ್ತು? ಅಮಿತ್ ಶಾ ಮಾಯಮಂತ್ರದ ದಂಡ ಇಟ್ಕೊಂಡಿದ್ದರಾ? ಕೇಂದ್ರದ ಮಂತ್ರಿ ಅಂತ ಕರೆದಿದಾರೆ ಬಂದಿದ್ದಾರೆ. ಮೋದಿ ಬಂದ್ರು ಗೆಲ್ಲಲ್ಲ ಎಂದು ಅಮಿತ್ ಶಾ ರಾಜ್ಯ ಪ್ರವಾಸದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದರು. ಸರ್ಕಾರದಿಂದ ಮಹದಾಯಿ ನೋಟಿಪಿಕೇಶನ್ 27-2-2020 ರಲ್ಲಿ ಆಗಿದೆ. ನೋಟಿಪೊಕೇಶನ್ 2 ವರ್ಷ 10 ತಿಂಗಳು ಕಳೆದರು ಡಿಪಿಆರ್ ಯಾಕೆ ಆಗಿಲ್ಲ? ಈಗ ನಾವು 2 ನೇ ತಾರೀಖು ಬೃಹತ್ ಸಮಾವೇಶ ಮಾಡ್ತೀವಿ ಅಂದ ಮೇಲೆ ಡಿಪಿಆರ್ ಮಾಡ್ತಾ ಇದಾರೆ 2 ವರ್ಷ 10 ತಿಂಗಳು ಯಾಕೆ ತಡ ಮಾಡಿದ್ದಾರೆ. ಎಲೆಕ್ಷನ್ ಬಂದಿದೆ ಅಂತ ಇದೀಗ ಡಿಪಿಆರ್ ಮಾಡಿದ್ದಾರೆ, ಈ ಗಿಮಿಕ್ ಎಲ್ಲ ಬಿಡಬೇಕು ಜನರ ಹಿತದೃಷ್ಟಿ ನೋಡಬೇಕು ಎಂದು ಹೇಳಿದರು.