ಮಾನಧನರಾಗಿ…. ಮಾನಗೇಡಿಯಾಗಿ ಬೇಡ

ಗುರುಬೋಧೆ
Advertisement

ಚಂಚಲವಾದ ಮನಸ್ಸನ್ನು ನಿಗ್ರಹಿಸಿ ಉದಾತ್ತ ವಿಚಾರಗಳಿಂದ ಉದಾತ್ತವಾದ ಚಿಂತನೆಗಳಿಂದ ಅದನ್ನು ಉನ್ಮನಗೊಳಿಸಿದರೆ ಅವನೇ ಮಹಾಪುರುಷನೆನಿಸುತ್ತಾನೆ. ಮಹಾಮಾನವನೆನಿಸುತ್ತಾನೆ.
ಸಕಲ ಪ್ರಾಣಿಗಳಲ್ಲಿ ಮಾನವನೇ ಶ್ರೇಷ್ಠನೆನಿಸಿದ್ದಾನೆ. ಭಾರತೀಯ ತತ್ವಜ್ಞಾನಿಗಳ ಪ್ರಕಾರ ಎಂಬತ್ತು ನಾಲ್ಕು ಲಕ್ಷ ಜೀವರಾಶಿಗಳಲ್ಲಿಯೇ ಮಾನವ ಜನ್ಮ ದೊಡ್ಡದು. ಯಾಕೆಂದರೆ ಮನಸ್ಸು ಮತ್ತು ಮಾನವನಿಗೆ ಮಾತ್ರವಿದೆ. ಸ್ವರ್ಗ-ಕೈಲಾಸ ವೈಕುಂಠಗಳಲ್ಲಿರುವ ದೇವತೆಗಳಿಗಿಂತಲೂ ಮಾನವನೇ ಅಧಿಕನೆನಿಸುತ್ತಾನೆ. ಮಾನವನು ಆತ್ಮಜ್ಞಾನದ ಬಲದಿಂದ ಅನುಭಾವಿಯಾಗುತ್ತಾನೆ, ಉನ್ಮನವನ್ನು ಸಾಧಿಸಿ ಮಹಾಮಾನವನೆನಿಸುತ್ತಾನೆ.
ಸತ್ಕಿçಯೆ ಅಂದರೆ ಒಳ್ಳೆಯ ಕೆಲಸಗಳು, ಸುಜ್ಞಾನ, ಸದ್ಭಕ್ತಿ, ಪ್ರೇಮ, ಸತ್ಯ ಅಹಿಂಸೆ ಮೊದಲಾದ ಸದ್ಗುಣಗಳು ಮಾನವರಲ್ಲಿ ಮಾತ್ರ ಬೆಳೆಯಲು ಅವಕಾಶವಿದೆ. ಇಂಥ ಗುಣಗಳಿಂದ ಪರಿಶುದ್ಧತೆ ಮತ್ತು ಪರಿಪೂರ್ಣತೆಯನ್ನು ಸಾಧಿಸಲು ಸಾಧ್ಯವಾಗುವದು. ಇದರಿಂದ ಮನ ಉನ್ಮನವಾಗುವದು.
ಎಲ್ಲದನ್ನು ಮುಖ್ಯವಾಗಿರುವ ಮನಸ್ಸನ್ನು ಉಂದ್ರಿಯಗಳ ದಾಸನನ್ನಾಗಿ ಮಾಡದೇ ಇಂದ್ರಿಯಗಳ ವಿಷಯವಾಸನೆಯಿಂದ ಮನಸ್ಸನ್ನು ಬೇರ್ಪಡಿಸಿ ಉದಾತ್ತ ನಿಲುವಿನಲ್ಲಿ ಉನ್ಮನಗೊಳಿಸುವ ಶಕ್ತಿ ಸಂಪನ್ನನು ಮಾನವನು, ಮನುತ ಇತಿ ಮಾನವ' ವಿಚಾರವುಳ್ಳ ಪ್ರಾಣಿಯೇ ಮಾನವ ಮತ್ತು ಮಾನ ಎಂಬುದು ಮನಸ್ಸಿನ ಉದಾತ್ತ ಶಕ್ತಿಯಾಗಿದೆ. ದೃಢವಾದ ಮಾನಸಿಕ ಶಕ್ತಿಯಿಂದ ಉತ್ಪನ್ನವಾದುದೆ ಮಾನ. ಇಂಥ ಮಾನವುಳ್ಳವನು ಮಾನವ ಮಾನವೆಂದರೆ ಅಳತೆ, ಪ್ರಮಾಣ ಗೌರವ ಘನತೆ, ಅಭಿಮಾನ, ಕೋಪ ಇತ್ಯಾದಿ ಅರ್ಥಗಳಿವೆ. ಅಲ್ಲದೇ ಆತ್ಮಗೌರವವುಳ್ಳ ವ್ಯಕ್ತಿಗೆಮಾನಧನ’ರು ಎಂದೆ ಕೆಯಲಾಗುತ್ತದೆ. ಗೌರವಕ್ಕೆ ಆಕರನಾಗಿರುವವನಿಗೆ `ಮಾನನಿಧಿ’ ಎನ್ನುತ್ತಾರೆ. ವಸ್ತುತಃ ಮಾನದಿಂದ ವರ್ತಿಸುವ ಮಾನವನು ವಿಷಯ ರಹಿತನಾಗಿ ಜಾಗ್ರತನಾಗಿ ಸ್ವತಂತ್ರನಾಗಿ ಮನಸ್ಸಿನ ಪ್ರಜ್ಞೆಯಿಂದ ವರ್ತಿಸುವವನಾಗಿ ಕಾಣ ಬರುತ್ತಾರೆ. ಆದರೆ ಮಾನಗೇಡಿಯಾದವನು ಇವೆಲ್ಲವುಗಳಿಂದ ದೂರವೇ ಉಳಿಯುತ್ತಾನೆ. ಬದುಕಿನಲ್ಲಿ ಮಾನಧನರಾಗಿ ಇರಬೇಕೇ ವಿನಃ ಮಾನಗೇಡಿಯಾಗಿ ಬದುಕುವದು ಮನುಷ್ಯ ಲಕ್ಷಣವಲ್ಲ.