ಹಾವೇರಿ: ನಮ್ಮದು ಸಕ್ಕರೆ ನಾಡು. ೮೭ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡುವ ಅವಕಾಶ ಲಭಿಸಿದ್ದು, ನಮ್ಮ ಭಾಗ್ಯ. ಎರಡೂವರೆ ದಶಕಗಳಿಗಿಂತ ಹೆಚ್ಚು ಕಾಲದಿಂದ ನಿರೀಕ್ಷೆ ಮಾಡುತ್ತಿದ್ದ ಅವಕಾಶ ಲಭಿಸಿದೆ. ಮಾದರಿ ಮತ್ತು ಅದ್ಭುತವಾಗಿ ಸಮ್ಮೇಳನ ಆಯೋಜನೆ ಮಾಡಿ ಕನ್ನಡ ನಾಡಿನ ಹಿರಿಮೆ ಗರಿಮೆಯನ್ನು ಸಾರುತ್ತೇವೆ…
ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಕೆ. ರವಿಕುಮಾರ್ ಅವರ ಅಂತರಂಗದ ಮಾತುಗಳಿವು. ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಅವಕಾಶ ಲಭಿಸಿದ ಖುಷಿಯಲ್ಲಿದ್ದ ಅವರ `ಸಂಯುಕ್ತ ಕರ್ನಾಟಕ’ದೊಂದಿಗೆ ತಮ್ಮ ಕನಸುಗಳನ್ನು ಹಂಚಿಕೊಂಡರು.