ಚಂಡೀಗಢ: ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರು ಪ್ರಯಾಣಿಸುತ್ತಿದ್ದ ಕಾರು ಹಿಸ್ಸಾರ್‌ನಲ್ಲಿ ಅಪಘಾತಕ್ಕೀಡಾಗಿದೆ.
ಏಕಾಏಕಿ ಅಡ್ಡ ಬಂದ ನೀಲಗಾಯ್‍ಗೆ ಕಾರು ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್ ಹೂಡಾ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ʻಇಂದು, ನನ್ನ ವಾಹನವು ಹಿಸಾರ್‌ಗೆ ಹೋಗುತ್ತಿರುವಾಗ ಅಪಘಾತಕ್ಕೀಡಾಯಿತು, ಆದರೆ ದೇವರ ದಯೆ ಮತ್ತು ನಿಮ್ಮ ಶುಭ ಹಾರೈಕೆಯಿಂದ ನಾನು ಮತ್ತು ನನ್ನ ಸಿಬ್ಬಂದಿ ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತೇವೆ.ʼ ಎಂದು ಬರೆದುಕೊಂಡಿದ್ದಾರೆ.