ದಾವಣಗೆರೆ: ಇಬ್ಬರ ಜಗಳದಲ್ಲಿ ಕೂಸು ಬಡವಾಯಿತು ಎಂಬ ಗಾದೆಯಂತೆ ಕಾಲೇಜು ಆಡಳಿತ ಮಂಡಳಿ ಹಾಗೂ ಕಟ್ಟಡದ ಮಾಲೀಕರ ನಡುವೆ ಜಟಾಪಟಿಯಲ್ಲಿ ವಿದ್ಯಾರ್ಥಿಗಳು ಹೈರಾಣಾಗಿರುವ ಘಟನೆ ವರದಿಯಾಗಿದೆ. ನಗರದ ವಿವೇಕಾನಂದ ಬಡಾವಣೆಯಲ್ಲಿರುವ ಮಹೇಶ್ ಪಿಯು ಕಾಲೇಜಿನ ಕಟ್ಟಡದ ಮಾಲೀಕರೊಂದಿಗೆ ಕಾಲೇಜು ಆಡಳಿತ ಮಂಡಳಿಗೆ ವೈಮನಸ್ಸು ಮೂಡಿದ ಕಾರಣ ಕಟ್ಟಡಕ್ಕೆ ನಾಲ್ಕೈದು ತಿಂಗಳಿಂದ ಬಾಡಿಗೆ ಕಟ್ಟಿರಲಿಲ್ಲ. ಈ ಕಾರಣ ಮಾಲೀಕ ಗೇಟ್‌ಗೆ ಬೀಗ ಹಾಕಿದ್ದರಿಂದ ವಿದ್ಯಾರ್ಥಿಗಳು ಪ್ರತಿದಿನ ಬಂದು ಗೇಟ್ ಹೊರಗೆ ನಿಂತು ಕಾದು ಸುಸ್ತಾಗಿ, ಮನೆ ಕಡೆಗೆ ಹೆಜ್ಜೆಹಾಕುತ್ತಿದ್ದಾರೆ.
ಕಳೆದ ಒಂದು ವಾರದಿಂದ ಕಟ್ಟಡದ ಮಾಲೀಕ ಗೇಟ್‌ಗೆ ಬೀಗ ಹಾಕಿದ್ದು, ಕಾಲೇಜಿನ ಪಿಯುಸಿ ವಿದ್ಯಾರ್ಥಿಗಳು ತರಗತಿಗಳಿಗೆ ಹೋಗದೆ ಗೇಟ್ ಮುಂದೆಯೇ ನಿಂತು ಕಾಯುತ್ತಿದ್ದಾರೆ. ಆದರೆ, ಅವರ ಮನವಿಗೆ ಕಾಲೇಜು ಆಡಳಿತ ಮಂಡಳಿಯಾಗಲೀ ಅಥವಾ ಕಟ್ಟಡದ ಮಾಲೀಕರು ಸ್ಪಂದಿಸುತ್ತಿಲ್ಲ ಎನ್ನಲಾಗಿದೆ.