ಮಹಿಳೆಯ ಬರ್ಬರ ಕೊಲೆ

ಕೊಲೆ
Advertisement

ಧಾರವಾಡ: ಮಹಿಳೆಯೋರ್ವಳ ಮುಖವನ್ನು ಜಜ್ಜಿ ಕೊಲೆ ಮಾಡಿದ ಘಟನೆ ಇಲ್ಲಿಯ ಜಿಲ್ಲಾಸ್ಪತ್ರೆ ಬಳಿ ಶುಕ್ರವಾರ ರಾತ್ರಿ ಸಂಭವಿಸಿದೆ.
ಇಲ್ಲಿಯ ನೆಹರು ನಗರದ ನಿವಾಸಿ ಸವಿತಾ ಕಿತ್ತೂರ(32) ಕೊಲೆಯಾಗಿರುವ ಮಹಿಳೆ ಎಂದು ತಿಳಿದು ಬಂದಿದೆ. ಸವಿತಾ ಅವರ ಸಂಬಂಧಿಕರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಆರೋಗ್ಯ ವಿಚಾರಿಸಲು ಸವಿತಾ ಅಲ್ಲಿಗೆ ಆಗಮಿಸಿದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.
ಜಿಲ್ಲಾಸ್ಪತ್ರೆ ಹತ್ತಿರದ ಸ್ಪರ್ಶ ಆಸ್ಪತ್ರೆ ಬಳಿ ಸವಿತಾ ಶವವಾಗಿ ಬಿದ್ದಿದ್ದನ್ನು ಕಂಡ ಅಲ್ಲಿಯ ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ, ಸವಿತಾ ಅವರ ಮುಖದ ಭಾಗ ಜಜ್ಜಿದಂತಾಗಿದ್ದು ಯಾವ ಕಾರಣಕ್ಕಾಗಿ ಕೊಲೆ ಮಾಡಲಾಗಿದೆ ಎನ್ನುವುದು ತನಿಖೆ ನಂತರ ತಿಳಿಯಬೇಕಿದೆ. ಈ ಕುರಿತು ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.