ಮಹಾ ಚಾಲಕರಿಗೆ ಗುಲಾಬಿ ನೀಡಿ ಸ್ವಾಗತಿಸಿದ ಎಡಿಜಿಪಿ

ಮಹಾ ಚಾಲಕರು
Advertisement

ನಿಪ್ಪಾಣಿ: ಕರ್ನಾಟಕ-ಮಹಾರಾಷ್ಟ್ರ ಗಡಿ ಪ್ರದೇಶವಾದ ಕೊಗನೊಳ್ಳಿ ಚೆಕ್‌ಪೋಸ್ಟ್‌ಗೆ ಮಂಗಳವಾರ ಭೇಟಿ ನೀಡಿದ ಎಡಿಜಿಪಿ ಅಲೋಕ್ ಕುಮಾರ್ ಅವರು ಮಹಾರಾಷ್ಟ್ರ ಬಸ್ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಗುಲಾಬಿ ಹೂವು ನೀಡಿ ಕರ್ನಾಟಕ ರಾಜ್ಯಕ್ಕೆ ಸ್ವಾಗತಿಸಿದರು. ಈ ಮೂಲಕ ಎರಡೂ ರಾಜ್ಯಗಳ ಮಧ್ಯೆ ಎಂದಿಗೂ ಪ್ರೀತಿ ಬಾಂಧವ್ಯದ ಸಂಬಂಧ ಬೆಸೆದಿರಲಿ ಎಂಬ ಸಂದೇಶ ಸಾರಿದರು.