ಮಹಾರಾಷ್ಟ್ರ ರಾಜ್ಯದ ಬಸ್ ತಡೆದು : ಕರವೇ ಪ್ರತಿಭಟನೆ

MH
Advertisement

ಇಳಕಲ್ – ನಗರದ ಬಸ್ ನಿಲ್ದಾಣದಲ್ಲಿ ಡಿ.02 ಶುಕ್ರವಾರ ರಾತ್ರಿಯಂದು ಮಹಾರಾಷ್ಟ್ರ ರಾಜ್ಯದ ಬಸ್ ತಡೆದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟಿಸಿದರು. ಮಹಾರಾಷ್ಟ್ರ ಸರ್ಕಾರ ಮತ್ತ ಎಂ ಇ ಎಸ್ ಸಂಘಟನೆಯ ದಬ್ಬಾಳಿಕೆ ವಿರೋಧಿಸಿ ಕರವೇ ಕಾರ್ಯಕರ್ತರು ಬಸ್‌ಗೆ ಕನ್ನಡದ ಬಾವುಟ ಕಟ್ಟಿ, ಘೋಷಣೆಗಳನ್ನು ಕೂಗುತ್ತಾ ನೀರು ಕೇಳಿದರೆ ಹಾಲು ಕೊಟ್ಟೆವು, ಬೆಳಗಾವಿ ಕೇಳಿದರೆ ಸೀಳಿ ಬಿಟ್ಟೆವು, ರಕ್ತ ಕೊಟ್ಟೆವು ಬೆಳಗಾವಿ ಬಿಡೋದಿಲ್ಲ, ಯಾರಪ್ಪನದು ಏನೈತೆ ಬೆಳಗಾವಿ ನಮ್ಮದು ಎಂದು ಮಹಾರಾಷ್ಟ್ರಕ್ಕೆ ಮತ್ತು ಎಂ ಇ ಎಸ್ ಸಂಘಟನೆಯ ಪುಂಡರಿಗೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಇಳಕಲ್ ತಾಲೂಕು ಅಧ್ಯಕ್ಷ ಮಹಾಂತೇಶ್ ವಂಕಲಕುಂಟಿ, ಹುನಗುಂದ ತಾಲೂಕು ಅಧ್ಯಕ್ಷ ರೋಹಿತ್ ಬಾರಕೇರ, ಇಳಕಲ್ ನಗರ ಘಟಕ ಅಧ್ಯಕ್ಷ ಅಶೋಕ್ ಪೂಜಾರಿ, ಮುರ್ತುಜ್ ಬದಾಮಿ, ಹುನಗುಂದ ತಾಲೂಕ ಪ್ರಧಾನ ಕಾರ್ಯದರ್ಶಿ ಸಂಗಮಕರ್, ಮುರ್ತುಜಾ ಮಾರ್ನಾಳ, ಚಂದ್ರು ಚಿನ್ನಾಪುರ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.