ಮಹದಾಯಿ ಜಲ-ಜನ ಆಂದೋಲನ ಸಮಾವೇಶಕ್ಕೆ ಹರಿದು ಬಂದ ಜನ

ಮಹದಾಯಿ
Advertisement

ಹುಬ್ಬಳ್ಳಿ: ಮಹದಾಯಿ ಯೋಜನೆ ಅನುಷ್ಠಾನ ವಿಳಂಬ ಖಂಡಿಸಿ, ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ನಗರದ ನೆಹರು ಮೈದಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬೃಹತ್‌ ಮಹದಾಯಿ ಜನಾಂದೋಲನ ಸಮಾವೇಶಕ್ಕೆ ಜನ ಸಾಗರ ಹರಿದು ಬಂತು.
ವೇದಿಕೆ ಹಾಗೂ ಮೈದಾನದ ಸುತ್ತ ವಿದ್ಯುತ್‌ ದೀಪಗಳನ್ನು ಅಳವಡಿಸಲಾಗಿದ್ದು, ಗಣ್ಯರು ಸಾಗಲು ಪ್ರತ್ಯೇಕ ಮಾರ್ಗ ನಿರ್ಮಿಸಲಾಗಿತ್ತು.
ಸಮಾವೇಶದ ಹಿನ್ನೆಲೆಯಲ್ಲಿ ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಡಾ. ಬಿ.ಆರ್‌. ಅಂಬೇಡ್ಕರ್‌ ವೃತ್ತಗಳನ್ನು ಪಕ್ಷದ ಧ್ವಜ, ಬಂಟಿಂಗ್ಸ್‌ಗಳಿಂದ ಸಿಂಗಾರಗೊಂಡಿದ್ದವು.
ನೆಹರು ಮೈದಾನದ ಸುತ್ತಲೂ ತ್ರಿವರ್ಣದ ಬೃಹತ್‌ ಬಾವುಟಗಳನ್ನು ಹಾಕಲಾಗಿದೆ. ಅಲ್ಲಲ್ಲಿ ಕಾಂಗ್ರೆಸ್‌ ಮುಖಂಡರ ಭಾವಚಿತ್ರಗಳ ಪ್ಲೆಕ್ಸ್‌ ಅಳವಡಿಸಿ, ಸ್ವಾಗತ ಕೋರಲಾಯಿತು. ಮುಂಜಾಗ್ರತಾ ಕ್ರಮವಾಗಿ ನಗರದ ಪ್ರಮುಖ ಪ್ರದೇಶಗಳಲ್ಲಿ ಹಾಗೂ ಮೈದಾನದ ಬಳಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ.
ಧಾರವಾಡ, ಗದಗ, ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ 20 ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಆಗಮಿಸಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಎಚ್‌.ಕೆ. ಪಾಟೀಲ, ಬಿ.ಕೆ. ಹರಿಪ್ರಸಾದ, ಸತೀಶ ಜಾರಕಿಹೊಳಿ, ಕೆ.ಎಚ್. ಮುನಿಯಪ್ಪ, ಶ್ರೀನಿವಾಸ ಮಾನೆ, ಪ್ರಸಾದ ಅಬ್ಬಯ್ಯ, ಅಂಜಲಿ ನಿಂಬಾಳ್ಕರ್, ಬಸವರಾಜ ರಾಯರೆಡ್ಡಿ, ಕೆ.ಎನ್. ಗಡ್ಡಿ, ಕುಸುಮಾವತಿ ಶಿವಳ್ಳಿ ಇತರರಿದ್ದರು.

ಮಹದಾಯಿ