ನವದೆಹಲಿ: ರಾಹುಲ್ ಗಾಂಧಿಗೆ ಮತ್ತೊಂದು ಆಘಾತ ಎದುರಾಗಿದೆ. ಲೋಕಸಭಾ ಸದಸ್ಯರಗೆ ನೀಡಲಾಗುವ ಸರ್ಕಾರಿ ವಸತಿಯನ್ನು ಖಾಲಿ ಮಾಡುವಂತೆ ಲೋಕಸಭೆ ವಸತಿ ಸಮಿತಿ ರಾಹುಲ್ ಗಾಂಧಿಗೆ ನೋಟಿಸ್ ಜಾರಿ ಮಾಡಿದೆ ಎಂದು ಮೂಲಗಳು ತಿಳಿಸಿವೆ. 2004ರಲ್ಲಿ ರಾಹುಲ್ ಗಾಂಧಿ ಮೊದಲ ಬಾರಿಗೆ ಲೋಕಸಭೆ ಸದಸ್ಯರಾಗು ಆಯ್ಕೆಯಾಗಿದ್ದಾಗ ಕಾಂಗ್ರೆಸ್ ನಾಯಕನಿಗೆ ದೆಹಲಿಯ ಲುಟೇನ್ಸ್‌ನ ತುಘಲಕ್ ಲೇನ್‌ನ ನಂ.12 ವಸತಿಯನ್ನು ನೀಡಲಾಗಿತ್ತು. ಉತ್ತರ ಪ್ರದೇಶದ ಅಮೇಥಿಯಿಂದ ಅವರು ಸಂಸದರಾಗಿ ಆಯ್ಕೆಯಾಗಿದ್ದರು. ರಾಹುಲ್ ಗಾಂಧಿ ತಮ್ಮ ಮನೆಯನ್ನು ಏಪ್ರಿಲ್ 22ರ ಒಳಗಾಗಿ ಖಾಲಿ ಮಾಡುವಂತೆ ಸೂಚನೆ ನೀಡಲಾಗಿದೆ.