ಕುಷ್ಟಗಿ: ಕುಷ್ಟಗಿ ಪಟ್ಟಣ ಸೇರಿದಂತೆ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ಹಗಲು,ರಾತ್ರಿ ಮನೆಗಳ ಬಾಗಿಲು ಮುರಿದು ಕಳ್ಳತನ ಮಾಡಿದ್ದ ಅಂತರ ಜಿಲ್ಲಾ ೪ ಜನ ಕಳ್ಳರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಗಂಗಾವತಿ ಉಪ ವಿಭಾಗದ ಡಿವೈಎಸ್ಪಿ ಶೇಖರಪ್ಪ, ಹೆಚ್ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಚಿನ್ನಾಭರಣ ಮತ್ತು ನಗದು ಕಳವು ಮಾಡಿದ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಬಳಿಕ ಹೊಸಕೆ ತೆಗೆದುಕೊಂಡಂತಹ ವಶಕ್ಕೆ ತೆಗೆದುಕೊಂಡು ಬಂಗಾರದ ಆಭರಣ ಕುರಿತು ಮಾಹಿತಿ ನೀಡಿ ಮಾತನಾಡಿದರು,ಮನೆ ಕಳ್ಳತನ ಮಾಡಿದ ಕಳ್ಳರನ್ನು ಪತ್ತೆಹಚ್ಚಲು ಜಿಲ್ಲಾ ಎಸ್.ಪಿ ಯಶೋಧಾ ಒಂಟಿಗೋಡಿ, ಗಂಗಾವತಿ ಉಪವಿಭಾಗದ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಸಿಪಿಐ ನಿಂಗಪ್ಪ ರುದ್ರಪ್ಪಗೋಳ ನೇತೃತ್ವದಲ್ಲಿ, ಕುಷ್ಟಗಿ,ತಾವರಗೇರಾ ಪೊಲೀಸ್ ಠಾಣೆಯ ಪಿಎಸೈಗಳಾದ ತಿಮ್ಮಣ ನಾಯಕ, ಮೌನೇಶ ರಾಠೋಡ್ ಹಾಗೂ ಪೊಲೀಸ್ ಸಿಬ್ಬಂದಿಗಳ ಒಳಗೊಂಡಂತೆ ೨ ತಂಡವನ್ನು ರಚಿಸಿ ಕಳ್ಳರ ಪತ್ತೆಗೆ ಕಾರ್ಯಚರಣೆ ಮಾಡಿದ ವೇಳೆಯಲ್ಲಿ ಹಗಲು ಮತ್ತು ರಾತ್ರಿ ಮನೆಗಳ್ಳತನ ಮಾಡಿ ಸಾರ್ವಜನಿಕರ ನಿದ್ದೆಗೆಡಸಿದ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಅಂತರ ಜಿಲ್ಲಾ ಕಳ್ಳರಾದ ಸಿದ್ಧರಾಮ ಪೂಜಾರಿ,ಗಂಗಾರಾಮ ಚವ್ಹಾಣ,ಗುಲಾಬ್ ಚವ್ಹಾಣ,ಹೀರಾಚಂದ ಪಾಟೀಲ ಈ ಎಲ್ಲಾ ಕಳ್ಳರಿಂದ ಬಂಗಾರ ನಗದು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು.
೨೪೬ ಗ್ರಾಮ ಬಂಗಾರ ವಶಕ್ಕೆ:
ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಮಾತನಾಡಿ,ಕುಷ್ಟಗಿ ಪೊಲೀಸ್ ವ್ಯಾಪ್ತಿಯಲ್ಲಿ ೫ ಕಳ್ಳತನ, ತಾವರಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ೨ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 340 ಗ್ರಾಂ ಬೆಳ್ಳಿ ಇದರ ಮೊತ್ತ 91,400 ರೂ.246 ಗ್ರಾಂ ಬಂಗಾರದ ಆಭರಣಗಳು ರೂ 13,26,500 ಲಕ್ಷ,ಕಳ್ಳತನಕ್ಕೆ ಉಪಯೋಗಿಸಿದ ಒಂದು ಮಾರುತಿ ಕಂಪನಿ ಸ್ವಿಪ್ಟ್ ಕಾರು. ಒಟ್ಟು ೭ ಕಳವಳ ಪ್ರಕರಣದಲ್ಲಿ 19,09,300 ಲಕ್ಷ ರೂ ಬೆಲೆ ಬಾಳುವ ಬೆಳ್ಳಿ, ಬಂಗಾರದ ಆಭರಣಗಳು ಮತ್ತು ಒಂದು ಕಾರ್ ನ್ನು ಆರೋಪಿತರಿಂದ ವಶಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದು ಎಸ್.ಪಿ ಅವರು ಆರೋಪಿತರನ್ನು ಪತ್ತೆ ಮಾಡುವಲ್ಲಿ ಮತ್ತು ಕಳ್ಳತನವಾದ ಬೆಳ್ಳಿ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳುವ, ಪತ್ತೆ ಕಾರ್ಯದಲ್ಲಿ ತೊಡಗಿದ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಯವರಿಗೆ ಅಭಿನಂದನೆ ಜೊತೆಗೆ ಬಹುಮಾನ ಘೋಷಣೆ ಮಾಡಲಿದ್ದಾರೆ ಎಂದರು.
ತಾವರಗೇರಾ ಪೊಲೀಸ್ ಠಾಣೆಯ ಪಿಎಸೈಗಳಾದ ತಿಮ್ಮಣ ನಾಯಕ, ಎಎಸ್ ಐ ಮಲ್ಲಪ್ಪ,ಪೊಲೀಸ್ ಸಿಬ್ಬಂದಿಗಳಾದ ಗುಂಡಪ್ಪ, ಪ್ರಶಾಂತ, ಹನಮಂತ, ಸಂಗಮೇಶ,ಅಮರೇಶ, ಕೊಟೇಶ, ಸಿ.ಡಿ.ಆರ್ ಕೊಪ್ಪಳ ವಿಭಾಗ ಹಾಗೂ ತನಿಖಾ ಸಹಾಯಕ ಎಎಸ್‌ಐ ದುರುಗಪ್ಪ, ಎಂ.ಬಿ ಇನಾಯತ್ ಈ ಎಲ್ಲಾ ಸಿಬ್ಬಂದಿಗಳು ಕಳ್ಳರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಭಾಗವಹಿಸಿದ್ದರು.