ಮತ ಚಲಾಯಿಸಿದ ರಾಹುಲ್

ರಾಹುಲ್
Advertisement

ಕ್ಯಾಂಪ್‌ನಲ್ಲೇ ರಾಹುಲ್ ಮತಚಲಾವಣೆ

ಬಳ್ಳಾರಿ: ಎಐಸಿಸಿ ಅಧ್ಯಕ್ಷ ಗಾದಿ ಚುನಾವಣೆ ಮತದಾನದ ಪ್ರಯುಕ್ತ ಸೋಮವಾರ ನಗರದ ಹೊರವಲಯದ ಸಂಗನಕಲ್ಲಿನ ಕೆಬಿಆರ್ ಬಡಾವಣೆಯ ಭಾರತ್ ಜೋಡೋ ಕ್ಯಾಂಪಿನಲ್ಲಿ ರಾಹುಲ್ ಗಾಂಧಿ ಮತದಾನ ಮಾಡಿದರು.
ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ, ಸಂಸದ ಡಿ.ಕೆ.ಸುರೇಶ್ ಸೇರಿ ಒಟ್ಟು 43 ಜನರು ಅಲ್ಲಿಯೇ ಹಕ್ಕು ಚಲಾಯಿಸಿದರು. ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿರುವವರ ಪೈಕಿ ಮತದಾನದ ಹಕ್ಕು ಹೊಂದಿದ ಐಸಿಸಿ ಸದಸ್ಯರಿಗೆ ಮತದಾನ ಮಾಡಲು ಅನುಕೂಲ ಮಾಡಲು ಎಐಸಿಸಿ ಕ್ಯಾಂಪ್‌ನಲ್ಲಿ ಮತದಾನ ಮಾಡಲು ಕೇಂದ್ರ ತೆರೆದಿತ್ತು.