ವಿಜಯಪುರ: ಜಿಲ್ಲೆಯಲ್ಲಿ ಮಕ್ಕಳ ಕಳ್ಳರು ಬಂದಿದ್ದಾರೆಂಬ ವದಂತಿ ಹಿನ್ನೆಲೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬನನ್ನು ಹಿಡಿದು ಥಳಿಸಿರುವ ಘಟನೆ ತಿಕೋಟಾ ತಾಲೂಕಿನ ಇಟ್ಟಂಗಿಹಾಳ ಗ್ರಾಮದ ಬಳಿ ನಡೆದಿದೆ.
ಇಟ್ಟಂಗಿಹಾಳ ಗ್ರಾಮದ ಪೂಜಾರ ವಸತಿ ಬಳಿ ಅಪರಿಚಿತ ಯುವಕನನ್ನು ಹಿಡಿದು ಥಳಿಸಿದ ಸ್ಥಳಿಯರು ಎಲ್ಲಿಂದ ಬಂದಿದ್ದೀಯಾ? ಎಷ್ಟು ಜನ ಬಂದಿದ್ದೀರಿ ಎಂದು ವಿಚಾರಿಸಿದ್ದಾರೆ. ಏನು ಹೇಳದೆ ಇದ್ದಾಗ ಮಕ್ಕಳ ಕದಿಯಲು ಬಂದಿದ್ದೀರಾ ಎಂದು ಗ್ರಾಮಸ್ಥರು ಯುವಕನಿಗೆ ಗಿಡವೊಂದಕ್ಕೆ ಕಟ್ಟಿ ಹಾಕಿ ಹಿಗ್ಗಾ ಮುಗ್ಗಾ ಹಲ್ಲೆ ಮಾಡಿದ್ದಾರೆ.
ಮೊನ್ನೆಯಷ್ಟೇ ಎಸ್ಪಿ (ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು) ಅವರು ಸುದ್ದಿಗೋಷ್ಟಿಯಲ್ಲಿ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬುದು ಕೇವಲ ವದಂತಿಯಾಗಿದೆ ಸಾರ್ವಜನಿಕರು ಅಪರಿಚಿತ ವ್ಯಕ್ತಿಗಳ ಮೇಲೆ ಯಾರು ಹಲ್ಲೆ ಮಾಡಬಾರದು. ಯಾರ ಮೇಲಾದರೂ ಅನುಮಾನ ಬಂದರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದು ಮನವಿ ಮಾಡಿದ್ದರು. ಆದರೂ ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ ಇಂತಹ ಘಟನೆ ನಡೆದಿದೆ.