ಬಾಗಲಕೋಟೆ(ಕಲಾದಗಿ): ಮಕ್ಕಳ ಕಳ್ಳರೆಂದು ಭಾವಿಸಿ ಸಾರ್ವಜನಿಕರು ಇಬ್ಬರು ಯುವಕರನ್ನು ಥಳಿಸಿ ಅವರ ಕಾರಿಗೆ ಬೆಂಕಿ ಹಚ್ಚಿರುವ ದುರ್ಘಟನೆ ಶುಕ್ರವಾರ ಸಂಜೆ 6 ಗಂಟೆ ಸುಮಾರಿಗೆ ಸಮೀಪದ ಖಜ್ಜಿಡೋಣಿ ಬಳಿಯ ಬಾಗಲಕೋಟೆ-ಬೆಳಗಾವಿ ಮುಖ್ಯ ರಸ್ತೆಯಲ್ಲಿ ಸಂಭವಿಸಿದೆ.
ಬಾಗಲಕೋಟೆಯ ಉದ್ಯಮಿಗಳ ಪುತ್ರರಾದ ರಾಹುಲ್ ದಗಚಿ ಹಾಗೂ ಕಿರಣ ಮುರುನಾಳ ಎಂಬ ಯುವಕರೇ ಮಕ್ಕಳ ಕಳ್ಳರೆಂದು ಅನುಮಾನಸ್ಪದದ ಮೇಲೆ ಸಾರ್ವಜನಿಕರಿಂದ ಥಳಿತಕ್ಕೆ ಒಳಗಾದವರಾಗಿದ್ದು, ಇವರಿಬ್ಬರಿದ್ದ ಕಾರು ಸಾರ್ವಜನಿಕರ ಆಕ್ರೋಶದ ಬೆಂಕಿಗೆ ಆಹುತಿಯಾಗಿದೆ. ಲೋಕಾಪುರದ ಪೊಲೀಸ್ ಠಾಣೆಯಲ್ಲಿ ಸದ್ಯ ಇವರ ವಿಚಾರಣೆ ನಡೆಯುತ್ತಿದೆ.