ಮಕ್ಕಳೊಂದಿಗೆ‌ ಮಕ್ಕಳಾಗಿ‌ ಕುಣಿದು ಕುಪ್ಪಳಿಸಿದ ಗಣ್ಯರು

Advertisement

ಹುಬ್ಬಳ್ಳಿ: ಮಕ್ಕಳಿಂದ‌ ಮಕ್ಕಳಿಗಾಗಿ ಸುನಿಧಿ ಕಲಾ ಸೌರಭ ವತಿಯಿಂದ ಆಯೋಜಿಸಿರುವ ರಾಜ್ಯ ಮಟ್ಟದ ಮಕ್ಕ‌ಳ‌ ರಂಗೋತ್ಸವದಲ್ಲಿ‌ ಬಾಲ ಪ್ರತಿಭೆ ಮಹಾನ್ಯ ಪಾಟೀಲ ಹಾಡಿಗೆ ವೇದಿಕೆ ಮೇಲಿದ್ದ ಗಣ್ಯರು, ಮಕ್ಕಳು ಹೆಜ್ಜೆ ಹಾಕಿ ಸಂಭ್ರಮಿಸಿದರು.
ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು..ಬೊಂಬೆ ಹೇಳುತೈತಿ ಮತ್ತೇ ಹೇಳುತೈತೆ ಹಾಡಿಗೆ ಮಕ್ಕಳಾದಿಯಾಗಿ ಬಿಜೆಪಿ‌ ರಾಜ್ಯ ಪ್ರಧಾನ ಕಾರ್ಯದರ್ಶಿ‌ ಮಹೇಶ ಟೆಂಗಿನಕಾಯಿ, ರಂಗಾಯಣ ಮಾಜಿ ನಿರ್ದೇಶಕ‌ ಸುಭಾಸ‌ ನರೇಂದ್ರ, ಖ್ಯಾತ‌ ಕಲಾವಿದೆ ವೀಣಾ ಅಠವಲೆ, ಭಾರತಿ ಶೆಟ್ಟರ್ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ನಾಟಕ ಪ್ರದರ್ಶನಕ್ಕೆ‌ಆಗಮಿಸಿದ್ದ ವಿವಿಧ ಶಾಲಾ ಮಕ್ಕಳು ಕುಣಿದು ಕುಪ್ಪಳಿಸಿದರು.