ಮಕ್ಕಳನ್ನು ಪಿಕಪ್ ಸ್ಟ್ಯಾಂಡಿನಲ್ಲಿ ಬಿಟ್ಟು ಸಮುದ್ರಕ್ಕೆ ಹಾರಿ ಮಹಿಳೆ ಆತ್ಮಹತ್ಯೆ

Advertisement

ಕುಮಟಾ: ಮಕ್ಕಳನ್ನು ಮನೆಯಿಂದ ಸ್ಕೂಟಿಯಲ್ಲಿ ಕರೆದುಕೊಂಡು ಬಂದ ಗೃಹಿಣಿಯೊಬ್ಬಳು ಪಿಕಪ್ ಸ್ಟ್ಯಾಂಡಿನಲ್ಲಿ ನಿಲ್ಲಿಸಿ ಗೆಳತಿ ಮನೆಗೆ ಹೋಗಿ ಬರುವುದಾಗಿ ತಿಳಿಸಿ ಹೋಗಿ ಸಮುದ್ರ ಹಾರಿದ ಘಟನೆ ಶನಿವಾರ ಸಂಜೆ ನಡೆದಿದೆ.
ಹೊನ್ನಾವರ ತಾಲೂಕಿನ ಹಿರೇಬೈಲಿನ ನಿವಾಸಿ ಹಾಗೂ ವೃತ್ತಿಯಲ್ಲಿ ಟೇಲರ್ ಆಗಿರುವ ನಿವೇದಿತ ನಾಗರಾಜ ಭಂಡಾರಿ(೩೬) ಆತ್ಮಹತ್ಯೆಗೆ ಶರಣಾದ ಗೃಹಿಣಿ. ಈಕೆ ವನ್ನಳ್ಳಿ ಬಳಿ ಬಂದು ಸ್ಕೂಟಿ ನಿಲ್ಲಿಸಿ ಸ್ಕೂಟಿಯಲ್ಲಿ ಕರಿಮಣಿ ಹಾಗೂ ಆಭರಣಗಳನ್ನು ತೆಗೆದಿಟ್ಟು ಸಮುದ್ರಕ್ಕೆ ಹಾರಿದ್ದಾಳೆ. ಆತ್ಮಹತ್ಯೆಗೆ ಕಾರಣ ಏನು ಎನ್ನುವುದು ತಿಳಿದುಬಂದಿಲ್ಲ.
ಭಾನುವಾರ ಸಂಜೆಯಾದರೂ ಮಹಿಳೆಯ ಮೃತದೇಹ ಪತ್ತೆಯಾಗಿಲ್ಲ. ಮೃತದೇಹಕ್ಕಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಮಹಿಳೆ ಧರಿಸಿದ್ದ ದುಪ್ಪಟ್ಟಾ ಪತ್ತೆಯಾಗಿದೆ. ಈ ಕುರಿತು ಚಂದಾವರ ತೊರಗೋಡದ ಸುಮಿತ್ರಾ ಗಜಾನನ ಭಂಡಾರಿ ಅವರು ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.