ಬಾಗಲಕೋಟೆ(ಇಳಕಲ್): ಮಂತ್ರಾಲಯಕ್ಕೆ ಪಾದಯಾತ್ರೆ ಹೊರಟ ವ್ಯಕ್ತಿಯೊಬ್ಬ ಮಂತ್ರಾಲಯ ತಲುಪಿದ ಬಳಿ ದ್ವಾರಬಾಗಿಲ ಬಳಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ ದಾರುಣ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ನಗರದ ಯೋಗೇಶ ಧನರಾಜ ಬೀಳಗಿ(೪೦) ತಮ್ಮ ಗೆಳೆಯರ ಜೊತೆಗೆ ಮಂತ್ರಾಲಯಕ್ಕೆ ಪಾದಯಾತ್ರೆ ಹೊರಟಿದ್ದರು. ಬರಿಗಾಲಿನಿಂದ ಹೊರಟ ಅವರ ಕಾಲುಗಳಲ್ಲಿ ಗುಳ್ಳೆಗಳು ಎದ್ದ ಕಾರಣ ತಂಡದ ಸದಸ್ಯರಿಂದ ಹಿಂದೆ ಬಿದ್ದಿದ್ದರು. ಮಂತ್ರಾಲಯದ ದ್ವಾರ ಬಾಗಿಲ ಸಮೀಪದಲ್ಲೇ ಇದ್ದಾಗ ಅಪರಿಚಿತ ವಾಹನ ಹಾಯ್ದು ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದರು ಎಂದು ಅಲ್ಲಿಗೆ ಹೋಗಿದ್ದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.