ರಾಯಚೂರು: ವರ್ಷಾಚರಣೆಗೆ ಹಿನ್ನೆಲೆಯಲ್ಲಿ ಸಹಸ್ರಾರು ಭಕ್ತರು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ದರ್ಶನಕ್ಕಾಗಿ ಮಠಕ್ಕೆ ಆಗಮಿಸಿದ್ದರು. ವಾರಂತ್ಯ ಇರುವ ಕಾರಣ ಬೆಂಗಳೂರು ಸೇರಿದಂತೆ ನಾನಾ ಭಾಗದಿಂದ ಭಕ್ತರು ರಾಯರ ಮಠಕ್ಕೆ
ಶನಿವಾರವೇ ಆಗಮಿಸಿ ಮಠದಲ್ಲಿ ತಂಗಿದ್ದರು. ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನಗೈದು ರಾಯರ ಮೂಲ ಬೃಂದಾವನ ದರ್ಶನ ಪಡೆದರು. ಭಕ್ತರು ಸಂಖ್ಯೆ ಹೆಚ್ಚಾಗಿದ್ದರು ದರ್ಶನಕ್ಕೆ ಸಾಲುಗಟ್ಟಿದ್ದ ದೃಶ್ಯಗಳು ಕಂಡು ಬಂದವು. ಭಕ್ತರಿಗೆ ಪ್ರಸಾದ ಹಾಗೂ ವಸತಿ ಗೃಹಗಳ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯಗಳನ್ನು ಶ್ರೀಮಠವು ಕಲ್ಪಿಸಿತು. ನಟ, ಸಂಸದ ಜಗ್ಗೇಶ್ ಭಾನುವಾರ ಶ್ರೀರಾಯರ ಮಠಕ್ಕೆ ಆಗಮಿಸಿದ್ದರು. ರಾಯರ ಬೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರಿಂದ ಆಶೀರ್ವಾದ ಪಡೆದರು. ಈ ವೇಳೆ ಕೆಲ ಕಾಲ ಶ್ರೀಗಳವರೊಂದಿಗೆ ಸಮಾಲೋಚನೆ ನಡೆಸಿದರು.