ರಾಯಚೂರು: ಅನಂತ ಚರ್ತುದಶಿ ಅಂಗವಾಗಿ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶುಕ್ರವಾರ ಅನಂತಪದ್ಮನಾಭ ವ್ರತ ಆಚರಣೆ ಕಾರ್ಯಕ್ರಮ ನಡೆಯಿತು.
ಶ್ರೀಮಠದ ಪೀಠಾಧಿಪತಿಗಳಾದ ಶ್ರೀಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಶ್ರೀಮೂಲರಾಮದೇವರ ಪೂಜೆ ಸಂದರ್ಭದಲ್ಲಿ ಅನಂತಪದ್ಮನಾಭ ವ್ರತವನ್ನು ಆಚರಣೆ ಮಾಡಿದರು.
ನಂತರ ಭಕ್ತರಿಗೆ ಆಶೀರ್ವದಿಸಿದರು. ಶ್ರೀಮಠದ ಅಧಿಕಾರಿಗಳು, ಸಿಬ್ಬಂದಿ ವರ್ಗ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.