ಮಂತ್ರಾಲಯದ ಗ್ರಾಮದೇವತೆ ಶ್ರೀಮಂಚಾಲಮ್ಮ ದೇವಿಗೆ ವಿಶೇಷ ಪೂಜೆ

ಮಂಚಾಲಮ್ಮ ದೇವಿ
Advertisement

ರಾಯಚೂರು: ದರ್ಗಾಷ್ಟಮಿ ಅಂಗವಾಗಿ ಮಂತ್ರಾಲಯದ ಗ್ರಾಮದೇವತೆ ಶ್ರೀ ಮಂಚಾಲಮ್ಮ ದೇವಿಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಸುಬುಧೇಂದ್ರ
ತೀರ್ಥ ಶ್ರೀಪಾದಂಗಳವರು ವಿಶೇಷ ಪೂಜೆ ಸಲ್ಲಿಸಿದರು.
ಬೆಳಗ್ಗೆ ಮಂತ್ರಾಲಯದ ಶ್ರೀಮಂಚಾಲಮ್ಮ ದೇವಿಗೆ ಪಂಚಾಮೃತಾಭಿಷೇಕ ಹಾಗೂ ಸುಗಂಧ ದ್ರವ್ಯಗಳ ಅಭಿಷೇಕವನ್ನು ಶ್ರೀಮಠ ಪೀಠಾಧಿಪತಿಗಳು ನೆರವೇರಿಸಿದರು. ಹಬ್ಬದ ರಜಾ ದಿನಗಳ ಹಿನ್ನೆಲೆಯಲ್ಲಿ ಮಂತ್ರಾಲಯಕ್ಕೆ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದಾರೆ.