ಭೀಮಪಲಾಸ್ ಸಂಗೀತೋತ್ಸವ ಸಮಾರೋಪ

ವೆಂಕಟೇಶಕುಮಾರ
Advertisement

ಹುಬ್ಬಳ್ಳಿ: ಪಂಡಿತ ಭೀಮಸೇನ ಜೋಶಿ ಅವರ ಸ್ಮರಣಾರ್ಥ ಪುಣೆಯಲ್ಲಿ ಆಯೋಜಿಸಿದ್ದ `ಭೀಮಪಲಾಸ್’ ಸಂಗೀತೋತ್ಸವ ಕಾರ್ಯಕ್ರಮ ರವಿವಾರ ಸಮಾರೋಪಗೊಂಡಿತು.
ಪದ್ಮಶ್ರೀ ವೆಂಕಟೇಶಕುಮಾರ, ಪಂಡಿತ ಗಣಪತಿ ಭಟ್ಟ ಹಾಸಣಗಿ, ಪಂಡಿತ ಜಯತೀರ್ಥ ಮೇವುಂಡಿ ಹಾಗೂ ನಾಡಿನ ವಿವಿಧ ಭಾಗದ ಮತ್ತು ಮಹಾರಾಷ್ಟ್ರದ ಸಂಗೀತ ಕಲಾವಿದರು ಪಾಲ್ಗೊಂಡಿದ್ದರು.
ರಾಜ್ಯದಲ್ಲಿ ನಡೆಸಿದ ಭೀಮಪಲಾಸ್ ಸಂಗೀತೋತ್ಸವ ಕಾರ್ಯಕ್ರಮ ಮಾದರಿಯಲ್ಲೇ ಪುಣೆಯಲ್ಲಿ ಧಾರವಾಡದ ಜಿ.ಬಿ.ಜೋಶಿ ಸ್ಮಾರಕ ಟ್ರಸ್ಟ್ ನೇತೃತ್ವದಲ್ಲಿ ಹುಬ್ಬಳ್ಳಿಯ ಕ್ಷಮತಾ ಸಂಸ್ಥೆ, ಪುಣೆಯ ಆವರ್ತನ ಗುರುಕುಲ ಸಂಸ್ಥೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಈ ಸಂಗೀತೋತ್ಸವ ಆಯೋಜನೆ ಮಾಡಲಾಗಿತ್ತು. ಪಂಡಿತ ಭೀಮಸೇನ್ ಜೋಶಿ ಅವರ ಪುಣೆಯಲ್ಲಿನ ಅಭಿಮಾನಿಗಳು, ಸಂಗೀತ ವಿದ್ಯಾರ್ಥಿಗಳು, ಸಂಗೀತ ದಿಗ್ಗಜರು, ಸಂಗೀತ ಪ್ರಿಯರು ಪಾಲ್ಗೊಂಡಿದ್ದರು. ಆಯೋಜಕರಾದ ಜಿ.ಬಿ.ಜೋಶಿ ಸ್ಮಾರಕ ಟ್ರಸ್ಟ್‌ನ ಸಮೀರ ಜೋಶಿ ಇದ್ದರು.

ಭೀಮಪಲಾಸ್