ಭಿನ್ನಮತ ಶೀಘ್ರ ಶಮನ

BASAVARAJ BOMAI
Advertisement


ಮಂಗಳೂರು: ಅಸಮಾಧಾನಗೊಂಡ ನಾಯಕರ ಜೊತೆ ಪಕ್ಷದ ಹಿರಿಯರು ಮಾತನಾಡುತ್ತಿದ್ದು, ಭಿನ್ನಮತ ಶಮನವಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಅವರು ಇಂದು ಮಾಧ್ಯಮದವರೊಂದಿಗೆ ಮಾತನಾಡಿದರು.

ಬಿಜೆಪಿ ಎರಡನೇ ಪಟ್ಟಿ ಬಿಡುಗಡೆಯಾಗಿದೆ. ಇನ್ನೂ 12 ಕ್ಷೇತ್ರ ಉಳಿದಿದೆ. ಕೆಲವೆಡೆ ಆಕಾಂಕ್ಷಿಗಳು, ವಿಧಾನ ಪರಿಷತ್ ಸದಸ್ಯರು ರಾಜೀನಾಮೆ ಕೊಟ್ಟಿದ್ದಾರೆ ಎಂದರು.

ರಾಜಕಾರಣದಲ್ಲಿ ಪಕ್ಷ ಬದಲಿಸೋದು ಸಾಮಾನ್ಯ

ಬದಲಿಸೋದು ಸಾಮಾನ್ಯ, ಆಗ್ತಾ ಇರುತ್ತೆ. ಅಸಮಾಧಾನಗೊಂಡವರ ಮನವೊಲಿಕೆ ಮಾಡುತ್ತೇವೆ. ಪಕ್ಷದಲ್ಲಿ ಎದ್ದಿರುವ ಅಸಮಾಧಾನ ಸರಿಪಡಿಸಲಾಗುತ್ತಿದೆ. ಕಾರ್ಯಕರ್ತರು ಗಟ್ಟಿ ಇದ್ದಾರೆ, ಇದರಿಂದ ಯಾವುದೇ ಹಾನಿಯಾಗುವುದಿಲ್ಲ ಬಹುತೇಕ ಕಡೆ ಪಕ್ಷದ ಭಿನ್ನಮತ ಶಮನ ಆಗಲಿದೆ ಎಂದರು.

ಆರೋಪಗಳಲ್ಲಿ ಹುರುಳಿಲ್ಲ
ಹಿರಿಯರ ಜತೆ ನಾನು ಹಾಗೂ ಹೈಕಮಾಂಡ್ ಮಾತಾಡುತ್ತಿದ್ದೇವೆ ಲಕ್ಷ್ಮಣ ಸವದಿ ಜನರ ವಿಶ್ವಾಸ ಉಳಿಸಿಕೊಳ್ಳಬೇಕು ಎಂದ ಅವರು ನೆಹರೂ ಓಲೇಕಾರ್ ಆರೋಪಗಳಲ್ಲಿ ಹುರುಳಿಲ್ಲ ಎಂದರು.

ಆರೋಪ ಸಾಬೀತು ಮಾಡಲಿ
ಅಸಮಾಧಾನಿತರ ಜೊತೆ ಹೈಕಮಾಂಡ್ ಮಾತನಾಡುತ್ತಿದೆ.. ನಾನು ಎಲ್ಲಾ ನಾಯಕರ ಜೊತೆ ಮಾತನಾಡಿದ್ದೇನೆ. ಭಿನ್ನಮತ ಶೀಘ್ರವೇ ಬಗೆಹರಿಯುವ ವಿಶ್ವಾಸ ಇದೆ. ಸವದಿ ಹಿರಿಯರು, ಸುಧೀರ್ಘ ರಾಜಕೀಯದಲ್ಲಿದ್ದಾರೆ. ಸವದಿಗೆ ಜನರಿಂದಲೂ ಒತ್ತಡ ಇದೆ, ಸಮಯ ಬೇಕು. ನೆಹರು ಓಲೇಕಾರ್ ಯಾವ ಆರೋಪ ಬೇಕಾದರೂ ಮಾಡಲಿ. ದಾಖಲೆ ಸಹಿತ 1,500 ಕೋಟಿ ಆರೋಪ ಸಾಬೀತು ಮಾಡಲಿ. ಕೇವಲ ಹೇಳಿಕೆ ಬೇಡ, ದಾಖಲೆ ನೀಡಲಿ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ
ಕಾಂಗ್ರೆಸ್ ನವರಿಗೆ 60ರಿಂದ 65 ಕ್ಷೇತ್ರಗಳಿಗೆ ಅಭ್ಯರ್ಥಿಗಳೇ ಇಲ್ಲ. ಈಗ ಆಮದು ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿ ಇದ್ದಾರೆ. ಕಾಂಗ್ರೆಸ್ ಗೆ ಸಮರ್ಥ ಅಭ್ಯರ್ಥಿ ಇಲ್ಲ, ಅವರು ಅಧಿಕಾರಕ್ಕೆ ಬರುವುದಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು.