ಭಾಷೆಯ ರಕ್ಷಣೆ ಬಂದಾಗ ಎಲ್ಲರೂ ಒಗ್ಗಟ್ಟಾಗಿ

Advertisement

ಕುಷ್ಟಗಿ: ಹನಮಸಾಗರ ಗ್ರಾಮದಲ್ಲಿ ನಡೆಯುತ್ತಿರುವ ಕೊಪ್ಪಳ ಜಿಲ್ಲಾಮಟ್ಟದ 12ನೇ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೆ ಪ್ರತಿಯೊಬ್ಬರು ಕಾರಣಿಭೂತರಾಗಬೇಕು.ನಾಡು,ನುಡಿ, ಕನ್ನಡ ಭಾಷೆಯ ರಕ್ಷಣೆ ಬಂದಾಗ ಎಲ್ಲರೂ ಕೂಡ ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಹೇಳಿದರು.

ಕೊಪ್ಪಳ ಜಿಲ್ಲಾ ಮಟ್ಟದ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ರಾಷ್ಟ್ರಧ್ವಜವನ್ನು ನೆರವೇರಿಸಿ ಮಾತನಾಡಿದರು ಕನ್ನಡ ಭಾಷೆಗೆ ತನ್ನದೇ ಆದ ಗೌರವ ಸ್ಥಾನಮಾನವಿದ್ದು ಆದರೆ ಕನ್ನಡ ಭಾಷೆಯನ್ನು ನಾವು ಮಾತನಾಡಲು ಹಿಂಜರಿಯುತ್ತಿದ್ದೇವೆ, ಇದು ಯಾವುದೇ ಕಾರಣಕ್ಕೂ ಆಗಬಾರದು ಕನ್ನಡವನ್ನು ಮಾತೃಭಾಷೆಯನ್ನಾಗಿ ಮಾತನಾಡಬೇಕು ಇನ್ನಿತರ ಭಾಷೆಗಳನ್ನು ಗೌರವಿಸಬೇಕು ಎಂದರು.

ಕನ್ನಡ ಭಾಷೆ ಉಳಿಯುವುದಾಗಿ ಪ್ರತಿಯೊಬ್ಬರು ಶ್ರಮಿಸಬೇಕು.ನಮ್ಮ  ಕರ್ತವ್ಯ ಏನು ಅನ್ನುವುದನ್ನು ಅರಿತುಕೊಂಡು ಕನ್ನಡ ಭಾಷೆ ಬೆಳವಣಿಗೆಗೆ ಯುವಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಕೆಲಸವಾಗಬೇಕು. ವಿದ್ಯಾರ್ಥಿಗಳಲ್ಲಿ ಕನ್ನಡ ಅಭಿಮಾನವನ್ನು ಬೆಳೆಸಬೇಕು  ಇಂತಹ ಕನ್ನಡ ಸಾಹಿತ್ಯ ಸಮ್ಮೇಳನಗಳು ಅವಶ್ಯವಾಗಿವೆ. ಈ ಸಮ್ಮೇಳನ ನಮ್ಮ ಊರಿನ ಜಾತ್ರೆ ಎನ್ನುವ ರೀತಿಯಲ್ಲಿ ಅಂದುಕೊಂಡು ಪ್ರತಿಯೊಬ್ಬರೂ ಸಹ ಭಾಗವಹಿಸಬೇಕು ಎಂದರು.

 ಜಿಲ್ಲಾ ಮಟ್ಟದ ಸಮ್ಮೇಳನ ಮಾರ್ಚ್ 5 ಮತ್ತು 6 ರಂದು ಎರಡು ದಿನಗಳ ಕಾಲ ನಡೆಯುತ್ತಿದ್ದು ಹೊಸ ಶಿಕ್ಷಣ ನೀತಿ ಅವಲೋಕನ, ರಂಗಭೂಮಿ ಒಂದು ಅವಲೋಕನ,ನಗೋಣ ಬನ್ನಿ, ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಕೀರ್ಣ ಗೋಷ್ಠಿ, ಸಮ್ಮೇಳನದ ಸರ್ವಾಧ್ಯಕ್ಷರಾಗಿರುವ ಡಾ.ಉದಯಶಂಕರ ಪುರಾಣಿಕ ಅವರ ಜೊತೆಗೆ ಸಂವಾದ, ಬಹಿರಂಗ ಅಧಿವೇಶನ  ನಡೆಯುವಂತಹ ಕಾರ್ಯಕ್ರಮಗಳಲ್ಲಿ ಸಾಯಿತಾಸಕ್ತರು ಕನ್ನಡ ಅಭಿಮಾನಿಗಳು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರು  ಭಾಗವಹಿಸಿ ಸಮ್ಮೇಳನ ಯಶಸ್ವಿಗೆ  ಮುಂದಾಗ  ಬೇಕು ಎಂದರು.

ಹಣಮಸಾಗರ ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ನಾಗಪ್ಪ ನಿರ್ವಾಣಿ, ಉಪಾಧ್ಯಕ್ಷ ಮಂಜುನಾಥ್ ರಾಮಣ್ಣ ಹುಲ್ಲೂರು,ಪಿಡಿಒ  ದೇವಿಂದ್ರಪ್ಪ ಕಮತರ, ಲೇಂಕಪ್ಪ, ಶ್ರೀನಿವಾಸ್ ಜಾಹಗೀದಾರ,ಶಿಕ್ಷಕ ಮೈಹಿಬೂಬುಸಾಬ್ ಕಂದಗಲ್, ಈರಣ್ಣ ಅಂಗಡಿ ಸಿದ್ದಪ್ಪ ಹಕ್ಕಿ,ಚಂದಪ್ಪ ಹಕ್ಕಿ, ಚಂದಾಲಿಂಗಪ್ಪ ಶಿವಪ್ಪ, ಶಿವಲೀಲಾ ಸೇರಿದಂತೆ  ಅನೇಕರು ಉಪಸ್ಥಿತರಿದ್ದರು ಇದೇ ವೇಳೆ ಶಾಲಾ ವಿದ್ಯಾರ್ಥಿಗಳಿಂದ ಜನಪ್ರತಿನಿಧಿಗಳು ಗೌರವ ವಂದನೆ ಸ್ವೀಕರಿಸಿದರು. ಕನ್ನಡ ಸಾಹಿತ್ಯ ಪರಿಷತ್ ಧ್ವಜಾರಣವನ್ನು ಕಸಾಪ  ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್, ಕನ್ನಡ ಧ್ವಜವನ್ನು ಕುಷ್ಟಗಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ  ಅಧ್ಯಕ್ಷ ವೀರೇಶ್ ಬಂಗಾರ ಶೆಟ್ಟರ್ ನೆರವೇರಿಸಿದರು.