ಭಾವೈಕ್ಯತೆ ಸಾರಿದ ಧಾರವಾಡಿಗರು

ಗಣೇಶ ವಿಸರ್ಜನೆ
Advertisement

ಧಾರವಾಡ: ಗಣೇಶ ವಿಸರ್ಜನೆ ವೇಳೆ ಮುಸ್ಲಿಂ ಬಾಂಧವರು ಪೂಜೆ ಸಲ್ಲಿಸಿ ಗಣೇಶನಿಗೆ ಪುಷ್ಪವೃಷ್ಟಿ ಸುರಿಸುವ ಮೂಲಕ ಭಾವೈಕ್ಯತೆಯ ಸಂದೇಶ ಸಾರಿದ್ದಾರೆ.
ಇಲ್ಲಿಯ ಟಿಕಾರೆ ರಸ್ತೆಯ `ಟಿಕಾರಿ ರಸ್ತೆ ಕಾ ರಾಜಾ’ ಗಣೇಶನನ್ನು ೧೧ನೇ ದಿನವಾದ ಶುಕ್ರವಾರ ವಿಸರ್ಜನೆ ಮಾಡಲಾಗುತ್ತಿತ್ತು. ಈ ಸಂದರ್ಭದಲ್ಲಿ ಟಿಕಾರೆ ರಸ್ತೆಯ ಮದನಿ ದರ್ಗಾದ ವತಿಯಿಂದ ಯುವಕರು ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ ಸುಮಾರು ೧೦ ನಿಮಿಷಗಳ ಕಾಲ ಸುತ್ತುಕಡೆಯಿಂದ ಪುಷ್ಪವೃಷ್ಟಿ ಸುರಿಸುತ್ತ ಗಣೇಶನ ಜಯಘೋಷ ಹಾಕಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಎಂ.ಎ. ಪಠಾಣ, ದಾವಲ ಬಿಜಾಪುರ, ಅರ್ಬಾಜ ಖಾನ್, ಮೊಯಿನ ಖಾನ್, ಇನಾಮುಲ್ಲಾ, ಹಫೀಜ ಖಾನ್, ರಿಯಾಜ್ ಶಾರುಖ್, ಸಮೀರ ಶೇಖ ಸೇರಿದಂತೆ ಇತರರು ಇದ್ದರು.