ಭಾರತ ಜೋಡೋ ಅಲ್ಲ, ಕಾಂಗ್ರೆಸ್‌ ಬಿಟ್ಟು ಓಡೋ ಯಾತ್ರೆ: ಕಟೀಲ್‌ ವ್ಯಂಗ್ಯ

ಭಾರತ ಜೋಡೋ
Advertisement

ಬೆಂಗಳೂರು: ಕಾಂಗ್ರೆಸ್‌ ಮಾಡುತ್ತಿರುವುದು ಭಾರತ ಜೋಡೋ ಯಾತ್ರೆಯಲ್ಲ, ಅದು ‘ಕಾಂಗ್ರೆಸ್‌ ಬಿಟ್ಟು ಓಡೋ ಯಾತ್ರೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್‌ ಪಕ್ಷದೊಳಗೆ ಆಂತರಿಕ ಪ್ರಜಾಪ್ರಭುತ್ವ ಇಲ್ಲ, ಪಕ್ಷದ ನಾಯಕತ್ವದ ಬಗ್ಗೆಯೂ ಅಸಮಾಧಾನವಿದೆ. ಪಕ್ಷ ಸುಧಾರಣೆಯಾಗದು ಎಂದು ಒಬ್ಬೊಬ್ಬರಾಗಿ ಪಕ್ಷಕ್ಕೆ ವಿದಾಯ ಹೇಳಿದ್ದಾರೆ. ಗುಲಾಂ ನಬಿ ಆಜಾದ್ ಕೂಡ ಕಾಂಗ್ರೆಸ್ ತೊರೆದು ಹೊಸ ಪಕ್ಷ ಸ್ಥಾಪಿಸಿದ್ದಾರೆ. ಹೀಗೆ
ಸ್ವಜನಪಕ್ಷಪಾತ, ಕುಟುಂಬ ರಾಜಕಾರಣದ ಮೂಲಕ ಗುರುತಿಸಿಕೊಂಡ ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ಪಕ್ಷದೊಳಗಿನ ಭಿನ್ನಮತ ಹಾಗೂ ಸಮರ್ಥ ನಾಯಕತ್ವದ ಕೊರತೆಯಿಂದ ನೆಲಕಚ್ಚಲಿದೆ. ಕಾಂಗ್ರೆಸ್ ತೊರೆಯುವ ನಾಯಕರನ್ನು ಒಂದೆಡೆ ಸೇರಿಸಿ ಕಾಂಗ್ರೆಸ್ ಜೋಡೋ ಮಾಡಬೇಕಿದ್ದ ರಾಹುಲ್ ಗಾಂಧಿ, ನೆಹರೂ ದೇಶ ಇಬ್ಭಾಗ ಮಾಡಿದ್ದನ್ನೇ ಮರೆತಂತಿದೆ ಎಂದಿದ್ದಾರೆ.