ಬಳ್ಳಾರಿ:ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಮ್ಮಿಕೊಂಡ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳುವ 1.5 ಲಕ್ಷ ಜನರಿಗೆ ಊಟದ ಡಬ್ಬ ನೀಡುವ ವ್ಯವಸ್ಥೆ ಮಾಡಿದ್ದೇವೆ ಎಂದು ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾತ್ರೆಯ ಭಾಗವಾಗಿ ನಗರದ ಮಾಜಿ ಪುರಸಭಾ ಕಾಲೇಜು ಆವರಣದಲ್ಲಿ ಹಮ್ಮಿಕೊಂಡ ಬಹಿರಂಗ ಸಮಾವೇಶದಲ್ಲಿ 5 ಲಕ್ಷ ಜನ ಪಾಲ್ಗೊಳ್ಳುವರು. ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗುವುದು ಎಂದರು.
ಒಬ್ಬ ಮನುಷ್ಯ ಹೊಟ್ಟೆ ತುಂಬುವಷ್ಟು ಚಿತ್ರಾನ್ನ, ಪಲಾವ್, ನೀರಿನ ಬಾಟಲಿ ನೀಡಲಾಗುವುದು. ಇತರೆ ಕಡೆಯಿಂದ ಬರುವ ಜನರಿಗೆ ಅವರು ಬರುವ ವಾಹನದಲ್ಲೇ ಊಟ, ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಪಕ್ಷದ ದೊಡ್ಡ ನಿರ್ಧಾರ, ಐತಿಹಾಸಿಕ ದುರಾಡಳಿತದ ವಿರುದ್ದ ಮತ್ತು ಕೇಂದ್ರ, ರಾಜ್ಯ ಸರ್ಕಾರಗಳು ಕೋಮು ಗಲಭೆ ಸೃಷ್ಠಿಸಿ ಅರಾಜಕತೆ, ಅಶಾಂತಿ ಉಂಟುಮಾಡಿದ್ದು ಕಂಡು ಇಡೀ ಭಾರತವನ್ನು ಸುತ್ತಿ ಜನರ ಬೆಂಬಲಕ್ಕೆ ಪಾದಯಾತ್ರೆ ಮಾಡುತ್ತಿದ್ದಾರೆ. ಇಡೀ ದೇಶದಲ್ಲಿ ಯಾರೂ ಮಾಡದ ಕೆಲಸವನ್ನು ನಮ್ಮ ನಾಯಕ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಕನ್ಯಾಕುಮಾರಿಯಿಂದ ಆರಂಭ ಅದ ಯಾತ್ರೆ ಇದೀಗ ಕರ್ನಾಟಕಕ್ಕೆ ಬಂದಿದ್ದು, ನಾಳೆ ಬಳ್ಳಾರಿಯಲ್ಲಿ ಬಹಿರಂಗ ಸಭೆ ನಡೆಯಲಿದೆ.
ರಾಜ್ಯದಲ್ಲೂ 40 %ಸರ್ಕಾರದ ದುರಾಡಳಿತವನ್ನು ತಿಳಿಸಿ, ಸಾಮರಸ್ಯ ಮೂಡಿಸಲು ಪಾದಯಾತ್ರೆ. ನಾಳೆ ಸಮಾವೇಶ ನಡೆಯಲಿದೆ ಎಂದು ಅವರು ತಿಳಿಸಿದರು.
ದಿನಕ್ಕೆ 25 ಕಿಮೀ ನಡೆಯುತ್ತಿದ್ದಾರೆ. ಕಲಾ ತಂಡ ಸ್ವಾಗತ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ.200-300 ಜನ ಅವರ ಜೊತೆ ನಾಯಕರು, ಕನ್ಯಾಕುಮಾರಿಯಿಂದ ಆರಂಭ ಮಾಡಿದವರ ಪೈಕಿ 300ಕ್ಕೂ ಹೆಚ್ಚು ಜನ ನಿರಂತರ ಹೆಜ್ಜೆ ಹಾಕುತ್ತಿದ್ದಾರೆ ಎಂದು ಅವರು ಹೇಳಿದರು.
ಬಿ.ರಾಮ್ ಪ್ರಸಾದ್, ಪಾಲಿಕೆ ಜಗನ್ ಮೋಹನ್, ಮುಖಂಡರಾದ ದೊಡ್ಡಪ್ಪ ಇತರರಿದ್ದರು.