ಭಾರತ್‌ ಜೋಡೋ ಯಾತ್ರೆಯಲ್ಲಿ ನೆಲಕ್ಕೆ ಬಿದ್ದ ಬಾಲಕಿ

ಭಾರತ್‌ ಜೋಡೋ ಯಾತ್ರೆ
Advertisement

ಎರಡು ದಿನಗಳ ಬಳಿಕ ಮತ್ತೆ ಇಂದು ಆರಂಭಗೊಂಡ ಭಾರತ್‌ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಹೆಜ್ಜೆ ಹಾಕಿದ್ದಾರೆ. ಮಂಡ್ಯ ಜಿಲ್ಲೆಯ ಬೆಳ್ಳಾಲೆ ಗ್ರಾಮದಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಂಡ ಸೋನಿಯಾ ಅವರನ್ನು ನೋಡಲು ಜನ ಮುಗಿಬಿದ್ದರು. ಕಟ್ಟಡ, ಮರ, ಮನೆಗಳನ್ನು ಏರಿ ಜನರು ಯಾತ್ರೆಯನ್ನು ವೀಕ್ಷಿಸಿದರು.
ಈ ವೇಳೆ ನಡೆದ ಘಟನೆ ಕುರಿತು ಕರ್ನಾಟಕ ಕಾಂಗ್ರೆಸ್‌ ಟ್ವಿಟರ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದೆ.
‘ಯಾತ್ರೆ ಸಾಗುವಾಗ ಯಾರಾದರೂ ಬಿದ್ದರೆ ಎಲ್ಲರೂ ಸೇರಿ ಅವರನ್ನು ಮೇಲೆತ್ತುತ್ತಾರೆ. ಯಾರೂ ನಿಮ್ಮ ಧರ್ಮ, ಜಾತಿ, ಭಾಷೆ ಯಾವುದೆಂದು ಕೇಳುವುದಿಲ್ಲ. ಇದೇ ಶಾಂತಿಯ, ಸೌಹಾರ್ದದ ಭಾರತ’ ಎಂದಿದ್ದರು ರಾಹುಲ್‌ ಗಾಂಧಿ. ಇಂದು ಸ್ವತಃ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರೇ ಆ ಕೆಲಸ ಮಾಡಿ ‘ಭಾರತೀಯತೆ’ಗೆ ಮಾದರಿಯಾದರು! ಎಂದು ಟ್ವೀಟ್‌ ಮಾಡಿದೆ.