ಭವಾನಿಗೆ ತಪ್ಪಿದ ಹಾಸನ ಟಿಕೆಟ್‌

ಸ್ವರೂಪ್‌
Advertisement

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಹಾಸನ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ವರೂಪ್‌ ಅವರಿಗೆ ಟಿಕೆಟ್‌ ಫೈನಲ್‌ ಮಾಡಲಾಗಿದೆ.
ಶೇಷಾದ್ರಿಪುರಂನ ಜೆಡಿಎಸ್ ಕಚೇರಿಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಮಹತ್ವದ ಸಭೆ ನಡೆಸಿ ಬಳಿಕ ಅಂತಿಮವಾಗಿ ಸ್ವರೂಪ್‌ ಅವರನ್ನು ಕಣಕ್ಕೆ ಇಳಿಸಿದ್ದಾರೆ. ಈ ಮೂಲಕ ಭವಾನಿ ರೇವಣ್ಣಗೆ ಟಿಕೆಟ್ ಕೈ ತಪ್ಪಿದ್ದು, ಎಚ್‌ಡಿಕೆ ಹೇಳಿದಂತೆ ಸ್ವರೂಪ್‌ಗೆ ಟಿಕೆಟ್ ಸಿಕ್ಕಿದೆ.