ಹುಬ್ಬಳ್ಳಿ: ಮೋದಿ ರೋಡ್ ಶೋ ನಡೆಸುವ ವೇಳೆ ಮುನ್ನುಗ್ಗಿ ಬಂದ ಯುವಕನೋರ್ವ ಅವರಿಗೆ ಹಾರ ಹಾಕಲು ಮುಂದಾದ ಘಟನೆ ನಗರದ ಗೋಕುಲ್ ರಸ್ತೆಯಲ್ಲಿ ನಡೆಯಿತು.
ಯುವಜನೋತ್ಸವ ಉದ್ಘಾಟನೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರು ವಿಮಾನ ನಿಲ್ದಾಣದಿಂದ ರೈಲ್ವೆ ಮೈದಾನದ ವರೆಗೆ ರೋಡ್ ಶೋ ನಡೆಸಿದರು. ಈ ವೇಳೆ ಪ್ರಧಾನಿಗೆ ಮಾಲಾರ್ಪಣೆ ಮಾಡಲು ಯುವಕ ಮುಂದಾಗಿದ್ದಾನೆ. ಕೂಡಲೇ ಆತನನ್ನು ಪ್ರಧಾನಿಯವರ ಭದ್ರತಾ ಸಿಬ್ಬಂದಿ ತಡೆದು ಬದಿಗೆ ಕಳಿಸಿದ್ದಾರೆ. ಆದರೆ, ಅಭಿಮಾನದಿಂದ ಯುವಕ ತಂದಿದ್ದ ಹಾರವನ್ನು ಕೈ ತೆಗೆದುಕೊಂಡ ಮೋದಿ ತಮ್ಮ ವಾಹನದ ಮೇಲೆ ಹಾಕುತ್ತಾರೆ