ಹಾವೇರಿ: ನಗರದಲ್ಲಿ ಮೂರು ದಿನಗಳ ಕಾಲ ಯಶಸ್ವಿಯಾಗಿ ನಡೆದ ನುಡಿಜಾತ್ರೆಗೆ ತೆರೆ ಬಿದ್ದಿದ್ದರೂ ಅದರ ನೆನಪುಗಳು ಹಚ್ಚ ಹಸಿರಾಗಿ ಉಳಿದಿವೆ. ಒಂದೆಡೆ ಸಮ್ಮೇಳನ ಜರುಗಿದ ಜಾಗೆ ಭಣಗುಡುತ್ತಿದ್ದರೆ, ಮೂರು ದಿನಗಳ ಘಟನಾವಳಿಗಳನ್ನ ಜನತೆ ಮೆಲುಕು ಹಾಕುತ್ತಿದ್ದಾರೆ.
ಹೊರವಲಯದ ರಾಷ್ಟ್ರೀಯ ಹೆದ್ದಾರಿ ಸಮೀಪದ ೧೨೦ಎಕರೆ ವಿಶಾಲ ಪ್ರದೇಶದಲ್ಲಿ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ಜರುಗಿ ರವಿವಾರ ರಾತ್ರಿ ಸಂಪನ್ನಗೊಂಡಿದೆ. ಒಂದು ತಿಂಗಳ ಕಾಲ ಜರ್ಮನ್ ತಂತ್ರಜ್ಞಾನದ ವೇದಿಕೆ ನಿರ್ಮಾಣ ಕಾರ್ಯ ವೀಕ್ಷಿಸಲು ನಿತ್ಯವೂ ಜನ ಸೇರುತ್ತಿದ್ದರು. ಒಂದು ವಾರಗಳ ಕಾಲವಂತೂ ಅತ್ಯಂತ ಪ್ರೇಕ್ಷಣೀಯ ಸ್ಥಳವಾಗಿ ಮಾರ್ಪಟ್ಟಿತ್ತು. ಲಕ್ಷಾಂತರ ಜನರಿಗೆ ಸಾಕ್ಷಿಯಾಗಿದ್ದ ಜಾಗ ಈಗ ಜನರಿಲ್ಲದೇ ಭೀಕೋ ಎನ್ನುತ್ತಿದೆ.