ಇಳಕಲ್: ಭಕ್ತ ಕನಕದಾಸರ ಜಯಂತಿ ಅಂಗವಾಗಿ ಇಳಕಲ್, ಹುನಗುಂದ ನಗರದಲ್ಲಿ ಪ್ರತಿಷ್ಠಾಪಿಸಲಾಗುವ ಭಕ್ತ ಕನಕದಾಸರ ಕಂಚಿನ ಮೂರ್ತಿಯನ್ನು ಮೆರವಣಿಗೆ ಮೂಲಕ ಸೋಮವಾರ ತರಲಾಯಿತು.
ತಾಲೂಕಿನ ತುರಮರಿ ಗ್ರಾಮದ ಮೂರ್ತಿ ತಯಾರಕ ವೆಂಕನಗೌಡ ಅವರು ಸುಂದರವಾಗಿ ಮೂರ್ತಿ ನಿರ್ಮಿಸಿದ್ದು, ಸಮಾಜದ ಮುಖಂಡರು ಎರಡೂ ಮೂರ್ತಿಗಳನ್ನು ಟ್ರ್ಯಾಕ್ಟರ್ ಮೂಲಕ ಇಳಕಲ್ ಹುನಗುಂದ ಪಟ್ಟಣಗಳಿಗೆ ತಂದರು.
ಕನಕದಾಸರ ಸರ್ಕಲ್‌ನಲ್ಲಿ ಅವುಗಳನ್ನು ಪ್ರತಿಷ್ಠಾಪಿಸಿ, ಡಿಸೆಂಬರ್ 9 ರಂದು ಅಧಿಕೃತವಾಗಿ ಉದ್ಘಾಟಿಸಲಾಗುವುದು ಎಂದು ಸಂಘಟಕರು ತಿಳಿಸಿದರು.