ಮೈಸೂರು: ಸಂಘಟಿತ ಆಟದ ಪ್ರದರ್ಶನ ನೀಡಿದ ಬೆಂಗಳೂರು ಬ್ಲಾಸ್ಟರ್ಸ್ ಮಹಾರಾಜ ಟ್ರೋಫಿಯ ೧೭ನೇ ಪಂದ್ಯದಲ್ಲಿ ಮಂಗಳೂರು ಯುನೈಟೆಡ್ ತಂಡವನ್ನು ೬೬ ರನ್ ಗಳಿಂದ ಮಣಿಸಿದೆ.
ಮೊದಲು ಬ್ಯಾಟ್ ಮಾಡಿದ ಬೆಂಗಳೂರು ಬ್ಲಾಸ್ಟರ್ಸ್ ೨೦ ಓವರ್ ಗಳಲ್ಲಿ ೪ ವಿಕೆಟ್‌ಗೆ ೧೯೧ ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಮಂಗಳೂರು ಯುನೈಟೆಡ್ ೧೬ ಓವರ್ ಗಳಲ್ಲಿ ೧೨೫ ರನ್‌ಗಳಿಗೆ ಸರ್ವಪತನ ಹೊಂದಿತು.
ಸವಾಲಿನ ಮೊತ್ತವನ್ನು ಹಿಂಬಾಲಿಸಿದ ಮಂಗಳೂರು ತಂಡದ ನಾಯಕ ಆರ್. ಸಮರ್ಥ್ ೩೨, ಅಭಿನವ್ ಮನೋಹರ್ ೨೩ ಹಾಗೂ ಶರತ್ ಅಜೇಯ ೨೨ ರನ್ ಹೊರತುಪಡಿಸಿದರೆ ಉಳಿದ ಆಟಗಾರರು ಬೆಂಗಳೂರು ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲರಾದರು. ಬೆಂಗಳೂರು ಪರ ಪ್ರದೀಪ್ ಹಾಗೂ ರಿಶಿ ಬೋಪಣ್ಣ ತಲಾ ೩ ವಿಕೆಟ್‌ಗಳಿಸಿ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಬೆಂಗಳೂರು ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕ ಎಲ್ ಆರ್. ಚೇತನ್ (೬) ಬೇಗನೆ ಔಟ್ ಆದರು. ಎರಡನೇ ವಿಕೆಟ್ ಗೆ ಮಯಾಂಕ್ ಅಗರ್ ವಾಲ್ (೪೭) ಹಾಗೂ ಕೆ.ವಿ ಅವಿನಾಶ್ (೪೦) ಜೋಡಿ ತಂಡಕ್ಕೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಎರಡನೇ ವಿಕೆಟ್‌ಗೆ ೭೪ ರನ್ ಸೇರಿಸಿತು. ನಾಯಕ ಮಯಾಂಕ್ ಅಗರ್ ವಾಲ್ ೨ ಬೌಂಡರಿ, ೩ ಸಿಕ್ಸರ್ ಸಿಡಿಸಿದರು. ಇವರು ೨೭ ಎಸೆತಗಳಲ್ಲಿ ೪೭ ರನ್ ಬಾಚಿಕೊಂಡರು.
ಶಿವಕುಮಾರ್ ರಕ್ಷಿತ್ ಉತ್ತಮ ಆಟದ ಪ್ರದರ್ಶನ ನೀಡಿದರು. ಇವರು ೨೪ ಎಸೆತಗಳಲ್ಲಿ ೩೪ ರನ್ ಸಿಡಿಸಿದರು.
ಸ್ಟಾರ್ ಆಟಗಾರ ಅನಿರುದ್ಧ ಜೋಶಿ ತಮ್ಮ ನೈಜ ಆಟವನ್ನು ಆಡಿದರು. ಇವರ ಮನಮೋಕ ಇನ್ನಿಂಗ್ಸ್ ನಲ್ಲಿ ೭ ಬೌಂಡರಿ, ೩ ಸಿಕ್ಸರ್ ಸೇರಿವೆ. ಜೋಶಿ ಅಜೇಯ ೫೭ ರನ್ ಬಾರಿಸಿ ತಂಡದ ಮೊತ್ತ ಹಿಗ್ಗಿಸಿದರು.
ಮಂಗಳೂರು ತಂಡದ ಪರ ಅನೀಶ್ವರ್ ಗೌತಮ್, ಎಚ್.ಎಸ್.ಶರತ್, ಶಶಿ ಕುಮಾರ್, ಆದಿತ್ಯ ಸೋಮಣ್ಣ ತಲಾ ಒಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್:
ಬೆಂಗಳೂರು ಬ್ಲಾಸ್ಟರ್ಸ್ ೨೦ ಓವರ್‌ಗಳಲ್ಲಿ ೪ ವಿಕೆಟ್ ೧೯೧ (ಮಯಾಂಕ್ ಅಗರ್ವಾಲ್ ೪೭, ಅನೀಶ್ ೪೦, ಶಿವಕುಮಾರ್ ರಕ್ಷಿತ್ ೩೪, ಅನಿರುಧ್ ಜೋಶಿ ೫೭* ಅನೀಶ್ವರ್ ಗೌತಮ್ ೨೫ಕ್ಕೆ ೧, ಶರತ್ ೪೯ಕ್ಕೆ ೧, ಶಶಿಕುಮಾರ್ ೨೧ಕ್ಕೆ ೧)
ಮಂಗಳೂರು ಯುನೈಟೆಡ್ ೧೬ ಓವರ್‌ಗಳಲ್ಲಿ ೧೨೫ (ಆರ್. ಸಮರ್ಥ ೩೨, ಅಭಿನವ್ ಮನೋಹರ್ ೨೩, ಶರತ್ ೨೨* ಬೋಪಣ್ಣ ೨೬ ಕ್ಕೆ ೩, ಪ್ರದೀಪ್ ೨೦ಕ್ಕೆ೩