ಬಾಗಲಕೋಟೆ: ನಡುಗಡ್ಡೆ ಪ್ರದೇಶದ ಕಬ್ಬನ್ನು ಕಟಾವು ಮಾಡಿ ಟ್ರ್ಯಾಕ್ಟರ್‌ನಲ್ಲಿಟ್ಟು ಅದನ್ನು ಬೋಟ್ ಮೂಲಕ ಸಾಗಿಸುವ ಪ್ರಯತ್ನದಲ್ಲಿ ಜಮಖಂಡಿ ತಾಲೂಕಿನ ಕಂಕಣವಾಡಿಯ ರೈತರು ಯಶಸ್ವಿಯಾಗಿದ್ದಾರೆ.
ಪ್ರತಿ ವರ್ಷ ನಡುಗಡ್ಡೆಯಲ್ಲಿ ಸಿಲುಕಿಕೊಳ್ಳುತ್ತಿರುವ ರೈತರು ಕಟಾವು ಆದ ಫಸಲನ್ನು ಬೋಟ್‌ನಲ್ಲಿ ಸಾಗಿಸುತ್ತಿದ್ದರು. ಅದರ ಪ್ರಮಾಣ ಕಡಿಮೆಯಾಗಿರುತ್ತಿತ್ತು ಈ ವರ್ಷ ಫಸಲನ್ನು ಕಟಾವು ನಂತರ ಟ್ರ್ಯಾಕ್ಟರ್‌ನಲ್ಲಿ ಶೇಖರಿಸಿ ವಾಹನವನ್ನು ಎರಡು ಬೊಟ್‌ನಲ್ಲಿ ಇಟ್ಟು ಸಾಗಿಸುತ್ತಿದ್ದಾರೆ.
ಕಝುಕಿಸ್ಥಾನದಲ್ಲಿ ಪ್ರಯತ್ನ ಯಶಸ್ವಿಯಾದುದನ್ನು ಯ್ಯೂಟ್ಯೂಬ್ ಮೂಲಕ ನೋಡಿರುವ ರೈತರು ಆ ಪ್ರಯತ್ನವನ್ನು ಇಲ್ಲಿಯೂ ಮಾಡಿ ಯಶಸ್ವಿಯಾಗಿದ್ದಾರೆ. ಇದರಿಂದ ಹೆಚ್ಚಿನ ಫಸಲನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಹಾಗೂ ಕಡಿಮೆ ಅವಧಿಯಲ್ಲಿ ಸಾಗಿಸಲು ಸಾಧ್ಯವಾಗಿದೆ ಎಂದು ಹೇಳಲಾಗುತ್ತಿದೆ.