ಬಿಜೆಪಿಯಿಂದ ನನಗೆ ಅನ್ಯಾಯವಾಗಿದೆ ಎಂದು ಶಾಸಕ ನೆಹರು ಓಲೇಕಾರ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ. ಅಲ್ಲದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧವೇ ಅವರು ಸಿಡಿದೆದ್ದಿದ್ದಾರೆ.
ಓಲೇಕಾರ ಯಾರು ಹೇಳಿದರು ಕೇಳೊಲ್ಲ. ಮುಂದೆ ಓಲೇಕಾರ ನನಗೆ ತೊಂದರೆ ಆಗುತ್ತಾರೆ ಎಂದು ಅವರು ಟಿಕೆಟ್ ತಪ್ಪಿಸಿದ್ದಾರೆ. 1500 ಕೋಟಿ ತುಂತುರು ಹನಿ ಯೋಜನೆ ನಾಶ ಮಾಡಿದ್ದಾರೆ. ಆದರೆ ನೀರಾವರಿ ಹಣ ಎಲ್ಲಿ ಹೋಗಿದೆ? ಅದರ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತೇನೆ. ಬೊಮ್ಮಾಯಿಯಿಂದ ಬಿಜೆಪಿ ಡ್ಯಾಮೇಜ್ ಆಗಲಿದೆ ಎಂದರು.