ಹುಬ್ಬಳ್ಳಿ: ದ್ವಿಚಕ್ರವಾಹನದಲ್ಲಿ ಹೊರಟ್ಟಿದ್ದ ವ್ಯಕ್ತಿಯ 5.30 ಲಕ್ಷ ಮೊತ್ತದ ಹಣದ ಬ್ಯಾಗನ್ನು ಕಳ್ಳರು ದೋಚಿದ ಘಟನೆ ನಗರದ ಜನಸಂದಣಿ ಪ್ರದೇಶವಾದ ದೇಶಪಾಂಡೆನಗರದ ಶಾರದಾ ಹೊಟೇಲ್ ಹತ್ತಿರ ನಡೆದಿದೆ.
ಹಣ ಕಳೆದುಕೊಂಡ ವ್ಯಕ್ತಿ ಅಹಮದಾಬಾದ್‌ನ ನಿವಾಸಿ ವಿಜಯಕುಮಾರ್ ಜೈನ್ ಎಂಬುವರಾಗಿದ್ದಾರೆ. ಮನೆ ವ್ಯವಹಾರಕ್ಕೆ ಸಂಬಂಧಪಟ್ಟ 5.30 ಲಕ್ಷ ರೂಗಳನ್ನು ಇಟ್ಟುಕೊಂಡು ದ್ವಿಚಕ್ರವಾಹನದಲ್ಲಿ ಹೊರಟ್ಟಿದ್ದಾಗ ದುಷ್ಕರ್ಮಿಗಳು ಇವರನ್ನು ಹಿಂಬಾಲಿಸಿ ಹಣದ ಬ್ಯಾಗನ್ನು ನಡು ರಸ್ತೆಯಲ್ಲೇ ಎಗರಿಸಿದ್ದಾರೆ. ಕಳ್ಳರ ಪತ್ತೆಗೆ ಪೊಲೀಸರು ಮೂರು ತಂಡಗಳಾಗಿ ಜಾಲ ಬೀಸಿದ್ದಾರೆ