ಬೈಕ್‌ಗೆ ಟ್ರ್ಯಾಕ್ಟರ್ ಡಿಕ್ಕಿ: ಇಬ್ಬರು ಗಂಭೀರ

ಟ್ಯಾಕ್ಟರ್‌
Advertisement

ಬಾಗಲಕೋಟೆ: ಶರವೇಗದಲ್ಲಿ ಬರುತ್ತಿದ್ದ ಕಬ್ಬು ತುಂಬಿದ ಟ್ರ್ಯಾಕ್ಟರ್‌ಗೆ ಬೈಕ್ ಸವಾರನೋರ್ವ ತನ್ನ ದಿಕ್ಕು ಬದಲಿಸಿ ಸಂಚರಿಸುವ ಸಂದರ್ಭ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಬೈಕ್ ಮೇಲೆ ಹರಿದ ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಬಕವಿಯ ಹಜಾರೆ ಟೆಕ್ಸ್‌ಟೈಲ್ಸ್ ಬಳಿ ಅಪಘಾತ ನಡೆದಿದ್ದು, ಮಹಾಲಿಂಗಪುರದಿಂದ ರಬಕವಿ ಕಡೆಗೆ ಬರುತ್ತಿದ್ದ ಭಾರಿ ಕಬ್ಬು ತುಂಬಿದ ಟ್ರ್ಯಾಕ್ಟರ್‌ಗೆ ಅದೇ ರಸ್ತೆಯಲ್ಲಿ ಬಲಬದಿಯಿಂದ ಬೈಕ್ ಸವಾರನೋರ್ವ ಟ್ರ್ಯಾಕ್ಟರ್ ಬರುವದನ್ನು ಗಮನಿಸದೆ ರಸ್ತೆಗಿಳಿದ ಪರಿಣಾಮ ಟ್ರ್ಯಾಕ್ಟರ್‌ ನಿಯಂತ್ರಣ ತಪ್ಪಿ ಇಬ್ಬರ ಮೇಲೂ ಹರಿದಿದೆ. ಟೆಕ್ಸಟೈಲ್‌ನ ಮುಂಭಾಗದಲ್ಲಿದ್ದ ಹಲವಾರು ವಾಹನಗಳು ಜಖಂಗೊಂಡಿದ್ದು, ಭಾರಿ ಜನನೀಬೀಡ ಪ್ರದೇಶವಾಗಿದ್ದ ಈ ರಸ್ತೆಯಲ್ಲಿ ಆ ಸಂದರ್ಭ ಅದೃಷ್ಟವಶಾತ್ ರಸ್ತೆ ಬದಿ ಯಾರೂ ಇಲ್ಲದ ಕಾರಣ ಭಾರಿ ಅನಾಹುತ ತಪ್ಪಿದಂತಾಗಿದೆ. ಸ್ಥಳಕ್ಕೆ ಬನಹಟ್ಟಿ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿ ತನಿಖೆ ಮುಂದುವರೆಸಿದ್ದಾರೆ.