ಬೇಡ ಎಂದರೂ‌ ಹೈಕಮಾಂಡ್ ಟಿಕೆಟ್‌‌ ಕೊಟ್ಟಿದೆ

Advertisement

ಕಲಬುರಗಿ : ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು, ಸೇವೆಯಲ್ಲಿ ಹಾಗೂ ಸಾಮಾಜಿಕ ಸೇವೆಯಲ್ಲಿ ಕಾರ್ಯ ನಿರ್ವಹಿಸಿ, ಅಫಜಲಪುರದ ಜೆ.ಎಂ ಕೊರಬು ಅವರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ ಎಂದು ಅಫಜಲಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ವೈ ಪಾಟೀಲ್ ಕಾಂಗ್ರೆಸ್ ಮುಖಂಡ ಜೆ.ಎಂ ಕೊರಬು ಜಂಟಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜೆ.ಎಂ ಕೊರಬು ಅವರು ಸಿದ್ಧರಾಮಯ್ಯನವರಿಗೆ ನನಗಿಂತಲೂ ಹೆಚ್ಚಿನ ಆಪ್ತರು. ಸರ್ಕಾರಿ ಸೇವೆ ಜೊತೆಗೆ ಕ್ಷೇತ್ರದಲ್ಲಿ ಅನೇಕ ಸಾಮಾಜಿಕ ಸೇವೆಯನ್ನು ಕೂಡ ಮಾಡುತ್ತ ಬಂದಿದ್ದಾರೆ. ಅಲ್ಲದೇ ಕೊರೊನಾ ಸಮಯದಲ್ಲಿ ಬಡವರಿಗೆ ಆಹಾರ ಕಿಟ್, ವೈದ್ಯಕೀಯ ಸೇವೆ ಸೇರಿದಂತೆ ಅನೇಕ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ನಾನು ಸಹ ಈ ಬಾರಿ ಹೊಸಬರಿಗೆ ಅವಕಾಶ ನೀಡಿ ನನಗೆ ಟಿಕೇಟ್ ಬೇಡ ಎಂದು ಹೈಕಮಾಂಡಿಗೆ ತಿಳಿಸಿದ್ದೆ.
ನಾನು ಅರ್ಜಿ ಸಲ್ಲಿಸದಿದ್ದರೂ ಕೂಡ ಕೊನೆಯ ಬಾರಿಗೆ ಸ್ಪರ್ದಿಸಿ ಎಂದು ಮನವಿ ಮಾಡಿದಾಗ ಚುನಾವಣೆಯಲ್ಲಿ ಸ್ಪರ್ದಿಸಲು ಒಪ್ಪಿಕೊಂಡೆ ಎಂದರು.
ನಾನು ಜೆ.ಎಂ ಕೊರಬು ಅವರನ್ನು ಭೇಟಿಯಾಗಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಬೇಕು ಎಂದು ಕೇಳಿಕೊಂಡಾಗ ಆಗ ಅವರು ಮನಸ್ಪೂರ್ತಿಯಾಗಿ ಒಪ್ಪಿಕೊಂಡು ಇಂದು ಪಕ್ಷಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಅಲ್ಲದೇ ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕ ಪಂಚಾಯತ್ ಚುನಾವಣೆಗಳಲ್ಲಿಯೂ ಸಹ ಒಗ್ಗೂಡಿ ಎದುರಿಸಲಿದ್ದೇವೆ. ನಾನು ಕೂಡ ರಾಜಕೀಯದಲ್ಲಿ ೫೦ ವರ್ಷ ಪೂರೈಸಿದ್ದೇನೆ ೯ ಚುನಾವಣೆಯಲ್ಲಿ ೬ ಬಾರಿ ಸೋತಿದ್ದು ೩ ಬಾರಿ ಗೆದ್ದಿದ್ದೇನೆ. ಕ್ಷೇತ್ರದಲ್ಲಿ ಸುಮಾರು ೩೫೦೦ ಕೋಟಿ ಅನುದಾನ ಒದಗಿಸಿದ್ದೇನೆ. ಹೈಕಮಾಂಡಿನ ನಿರ್ದೆಶನದ ಮೇಲೆ ಚುನಾವಣೆಯಲ್ಲಿ ಸ್ಪರ್ದಿಸಲು ಒಪ್ಪಿಕೊಂಡೆ, ಇದು ನನ್ನ ಕೊನೆಯ ಚುನಾವಣೆ ಎಂದು ಸ್ಪಷ್ಟಪಡಿಸಿದದರು.
ಇಂದು ಕಾಂಗ್ರೆಸ್ ಪಕ್ಷ ಸುದೀರ್ಘ ಯಶಸ್ಸು ಆಡಳಿತ ನಡೆಸಿದೆ. ಬಿಜೆಪಿ ಆಡಳಿತ ಸಂಪೂರ್ಣವಾಗಿ ಕುಸಿದು ಹೋಗಿದ್ದು, ಜನರು ಇದರಿಂದ ತತ್ತರಿಸಿ ಹೋಗಿದ್ದಾರೆ. ರಾಜ್ಯ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬರುವುದು ಖಚಿತ. ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಸಿದ್ಧಾಂತದ ಮೇಲೆ ಕಾಂಗ್ರೆಸ್ ಪಕ್ಷ ನಡೆಯುತ್ತಿದೆ. ಅಲ್ಲದೇ ಈ ಭಾಗಕ್ಕೆ ೩೭೧ ಭಾಗ್ಯವನ್ನು ಕಲ್ಪಿಸಿದ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಇಂದು ದೇಶದ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿದ್ದಾರೆ. ಅದೇ ರೀತಿ ಅವರು ಇನ್ನೂ ಹೆಚ್ಚಿನ ಉನ್ನತ ಸ್ಥಾನ ಹೊಂದಬೇಕು ಎನ್ನವುದು ಜನರ ಆಶಯವಾಗಿದೆ.
ಕೋಮುವಾದ ಪಕ್ಷವನ್ನು ಹೊಡೆದೋಡಿಸಬೇಕು: ರಾಜ್ಯದಲ್ಲಿ ಕೋಮುವಾದ ಸೃಷ್ಟಿಸುತ್ತಿರುವ ಪಕ್ಷವನ್ನು ಹೊಡೆದೋಡಿಸಿ, ಡಾ.ಬಿ.ಆರ್ ಅಂಬೇಡ್ಕರ್ ಅವರ ತತ್ವ ಸಿದ್ದಾಂತಗಳಿಗೆ ಬದ್ದರಾಗಿ ನಡೆಯುತ್ತಿರುವ ಕಾಂಗ್ರೆಸ್ ಪಕ್ಷವನ್ನು ಅದಿಕಾರಕ್ಕೆ ತರಲು ಪ್ರಯತ್ನಿಸುವೆ ಎಂದು ಕಾಂಗ್ರೆಸ್ ಮುಖಂಡರಾದ ಜೆ.ಎಂ ಕೊರಬು ತಿಳಿಸಿದರು.
ನಗರದ ಜಂಟಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕ್ಷೇತ್ರದ ಜನರಿಗೆ ನ್ಯಾಯ ಒದಗಿಸಬೇಕು ಎನ್ನವುದೇ ನನ್ನ ಪ್ರಮುಖ ಉದ್ದೇಶವಾಗಿದೆ. ನಾನು ಕೂಡ ಕಾಂಗ್ರೆಸ್ ಪಕ್ಷದ ಟಿಕೇಟ್ ಆಕಾಂಕ್ಷಿಯಾಗಿದ್ದೆ. ಹೈಕಮಾಂಡ್ ಅವರು ಎಂ.ವೈ ಪಾಟೀಲ್‌ರಿಗೆ ಟಿಕೇಟ್ ನೀಡಿದ್ದು ಸಂತೋಷದ ವಿಷಯ ಏಕೆಂದರೆ ರಾಜಕೀಯದಲ್ಲಿ ಅವರು ಹಿರಿಯ ನಾಯಕರು. ಪಕ್ಷದ ಸಿದ್ದಾಂತದ ಮೇಲೆ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ಶ್ರಮಿಸುತ್ತೇನೆ ಎಂದು ಹೇಳಿದರು