ಬೆಳಗಾವಿ: ಗಾಂಜಾ ಪ್ರಕರಣದಲ್ಲಿ ವ್ಯಕ್ತಿಯೊಬ್ಬ ಪೊಲೀಸ ವಶದಲ್ಲಿದ್ದಾಗಲೇ ಮೃತಪಟ್ಟ ಘಟನೆ ಇಂದು ನಡೆದಿದೆ, ಹುಕ್ಕೇರಿ ತಾಲುಕಿನ ಬೆಲ್ಲದಬಾಗೇವಾಡಿಯ ಬಸನಗೌಡ ಪಾಟೀಲ ಎಂಬಾತನೇ ಮೃತಪಟ್ಟವ ಎಂದು ಹೇಳಲಾಗಿದೆ.
ಕೆಲವರು ಇದು ಲಾಕಪ್ ಡೆತ್ ಎಂದು ಹೇಳುತ್ತಿದ್ದಾರೆ. ಈ ಪ್ರಕರಣವನ್ನು ತನಿಖೆಗಾಗಿ ಸಿಐಡಿಗೆ ಒಪ್ಪಿಸಲಾಗುವುದು’ ಎಂದು ಡಿಸಿಪಿ(ಕಾನೂನು ಮತ್ತು ಸುವ್ಯವಸ್ಥೆ) ರವೀಂದ್ರ ಗದಾಡಿ ತಿಳಿಸಿದ್ದಾರೆ. ಗಾಂಜಾ ಪ್ರಕರಣದಲ್ಲಿ ಈತನನ್ನು ತರುತ್ತಿರುವ ಸಂದರ್ಭದಲ್ಲಿ ಮೂರ್ಛೆರೋಗ ಬಂದಿದೆ. ತಕ್ಷಣ ಆತನನ್ನು ಕಾಕತಿಯಲ್ಕಿ ಚಿಕಿತ್ಸೆಗೆ ಒಳಪಡಿಸಲಾಗಿದೆ.ನಂತರ ವಾಂತಿ ಬೇಧಿ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಆತ ಮೃತಪಟ್ಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.