ಬೆಳಗಾವಿ: ಇಲ್ಲಿನ ,ಬಿಮ್ಸ್ ಆಸ್ಪತ್ರೆಗೆ ಸೋಮವಾರ ರಾತ್ರಿ ಸಚಿವ ಡಾ.ಕೆ.ಸುಧಾಕರ್, ಆರ್.ಅಶೋಕ್ ದಿಢೀರ್ ಭೇಟಿ ನೀಡಿದ್ದಾರೆ.
ಆಸ್ಪತ್ರೆಯಲ್ಲಿ ಐಸಿಯು, ಎನ್ಐಸಿಯು, ಎಮ್ಐಸಿಯುಗಳಿಗೆ ಭೇಟಿ ಆಕ್ಸಿಜನ್ ಪೈಪ್ಗಳ ನಿರ್ವಹಣೆ ಬಗ್ಗೆ ಮಾಹಿತಿ ಪಡೆದ ಸಚಿವರು ಬಿಮ್ಸ್ ಆವರಣದಲ್ಲಿ ಆಕ್ಸಿಜನ್ ಪ್ಲಾಂಟ್ಗಳಿಗೂ ಭೇಟಿ ನೀಡಿ ಪರಿಶೀಲಿಸಿದರು.
ಸಕಲ ಮುಂಜಾಗ್ರತಾ ಕ್ರಮ ಅನುಸರಿಸಿ ಸಿದ್ಧತೆ ಕೈಗೊಳ್ಳಲು ಸಲಹೆ ನೀಡಿದ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದು ತೆರಳಿದರು. ಸಚಿವದ್ವಯರು. ಬೆಳಗ್ಗೆ ಆರ್ ಅಶೋಕ ಅಧ್ಯಕ್ಷತೆಯಲ್ಲಿ ಸಭೆ ಮಾಡಿದವು ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದರು.ಆಸ್ಪತ್ರೆಯಲ್ಲಿ ಯಾವ ರೀತಿ ಸಿದ್ಧತೆ ಇದೆ ಅನ್ನೋದನ್ನ ಯಾರಿಗೂ ತಿಳಿಸದೇ ಬಿಮ್ಸ್ ಗೆ ಬಂದಿದ್ದೇವೆಎಲ್ಲಾ ವ್ಯವಸ್ಥೆ ನೋಡ್ತಿದ್ದೇವೆ. ಆಸ್ಪತ್ರೆಯಲ್ಲಿ ಈಗಾಗಲೇ ಐದು ಆಕ್ಸಿಜನ್ ಪ್ಲಾಂಟ್ ಅಳವಡಿಸಿದ್ದೆವೆ ಎಂದು ಸಚಿವಧ್ವಯರು ಹೇಳಿದರು.