ಬೆಳಗಾವಿಯಿಂದ ಜ. 11ರಿಂದ ಕಾಂಗ್ರೆಸ್ ಬಸ್ ಯಾತ್ರೆ

ಬಸ್‌ ಯಾತ್ರೆ
Advertisement

ಬೆಳಗಾವಿ: ಬರುವ ಜ. 11 ರಿಂದ ಬೆಳಗಾವಿಯಿಂದ ಕಾಂಗ್ರೆಸ್ ಬಸ್ ಯಾತ್ರೆಗೆ ಚಾಲನೆ ದೊರೆಯಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಬಸ್ ಯಾತ್ರಾ ಪೂರ್ವಸಭೆಯಲ್ಲಿ ಮಾತನಾಡಿದ ಅವರು, ಒಟ್ಟು 21 ಜಿಲ್ಲೆಗಳಲ್ಲಿ ಬಸ್ ಯಾತ್ರೆ ಸಂಚರಿಸಲಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಸ್ ಯಾತ್ರೆ ಮೂಲಕ ಚುನಾವಣಾ ಪ್ರಚಾರ ಕಾರ್ಯಕ್ರಮವನ್ನು ಬೆಳಗಾವಿಯಿಂದ ಹಮ್ಮಿಕೊಳ್ಳಲಿದ್ದಾರೆ ಎಂದರು.
ಯಾತ್ರೆ ವೇಳಾಪಟ್ಟಿ
ಜ. ೧೧ರಂದು ಬೆಳಗಾವಿ ಜಿಲ್ಲೆ, ೧೬ರಂದು ವಿಜಯನಗರ ಜಿಲ್ಲೆ, ೧೭ರಂದು ಕೊಪ್ಪಳ, ೧೮ಕ್ಕೆ ಬಾಗಲಕೋಟೆ, ಗದಗ ೧೯ಕ್ಕೆ ಹಾವೇರಿ, ದಾವಣಗೆರೆ ಜಿಲ್ಲೆ, ೨೧ರಂದು ಹಾಸನ, ಚಿಕ್ಕಮಗಳೂರು, ೨೨ರಂದು ಉಡುಪಿ, ದಕ್ಷಿಣ ಕನ್ನಡ, ೨೩ರಂದು ಕೋಲಾರ, ಚಿಕ್ಕಬಳ್ಳಾಪುರ, ೨೪ ರಂದು ತುಮಕೂರು, ಬೆಂಗಳೂರು ಗ್ರಾಮಾಂತರ, ೨೫ರಂದು ಚಾಮರಾಜನಗರ, ಮೈಸೂರು, ೨೬ರಂದು ಮಂಡ್ಯ ಮತ್ತು ರಾಮನಗರ, ೨೭ರಂದು ಯಾದಗಿರಿ-ಕಲಬುರಗಿಯಲ್ಲಿ ನಡೆಯಲಿದೆ ಎಂದು ಸತೀಶ್ ವಿವರಿಸಿದರು.