ಬೆಳಗಾವಿಯಲ್ಲಿ ಮತಾಂತರ ಯತ್ನ..!

ಮತಾಂತರ
Advertisement

ಬೆಳಗಾವಿ: ಮತಾಂತರಕ್ಕೆ ಸಂಬಂಧಿಸಿದಂತೆ ಕಳೆದ ಅಧಿವೇಶನದಲ್ಲಿ ವಿಧೇಯಕ ಪಾಸಾಗಿದ್ದರೂ ಗಡಿನಾಡ ಬೆಳಗಾವಿಯಲ್ಲಿ ಚಟುವಟಿಕೆಗಳು ಬಿರುಸಿನಿಂದ ತೆರೆಮರೆಯಲ್ಲಿ ನಡೆದಿದ್ದು ಆತಂಕಕ್ಕೆ ಕಾರಣವಾಗಿದೆ. ನಿರಂತರ ಪ್ರಾರ್ಥನೆ ನೆಪದಲ್ಲಿ ಅನ್ಯಕೋಮಿನವರ ಮನಪರಿವರ್ತನೆಗೆ ಈ ರೀತಿಯ ಚಟುವಟಿಕೆಗಳು ನಡೆಯುತ್ತಿವೆ ಎಂದು ಹೇಳಲಾಗಿದೆ.
ಆಯುಧ ಪೂಜೆ ಮತ್ತು ವಿಜಯ ದಶಮಿಯಂದೆ ಇಂತಹ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಆದರೆ ಈ ಕಾರ್ಯಕ್ರಮದ ಹಿನ್ನೆಲೆಯನ್ನು ಅರಿತ ಹಿಂದೂಪರ ಸಂಘಟನೆಗಳು ಸ್ಥಳಕ್ಕೆ ಧಾವಿಸಿದ್ದರಿಂದ ಮನಪರಿವರ್ತನೆ ಕಾರ್ಯಕ್ರಮಗಳು ರದ್ದಾದವು ಎಂದು ಮೂಲಗಳು ಖಚಿತಪಡಿಸಿವೆ.
ಕಳೆದ ೪ ಮತ್ತು ೫ ರಂದು ಎರಡು ದಿನಗಳ ಕಾಲ ಬೇರೆ ಹೆಸರಿನ ಮೇಲೆ ಇಂತಹ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಒಂದು ದಿನ ವಿಚಾರ ಸಂಕಿರಣವನ್ನು ಖಾಸಗಿ ಹೊಟೇಲ್‌ನಲ್ಲಿ ಆಯೋಜನೆ ಮಾಡಲಾಗಿದ್ದರೆ, ಮತ್ತೊಂದು ದಿನ ಮನಪರಿವರ್ತನೆ ಎನ್ನುವ ಕಾರ್ಯಕ್ರಮವನ್ನು ಖಾಸಗಿ ಕಾಲೇಜಿನ ಸಭಾಂಗಣದಲ್ಲಿ ಆಯೋಜನೆ ಮಾಡಲಾಗಿತ್ತು. ಆದರೆ, ನಿರಂತರ ಎಂಟರಿಂದ ಹತ್ತು ತಾಸುಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಎಲ್ಲರಿಗೂ ಮುಕ್ತ ಪ್ರವೇಶ ಇರಲಿಲ್ಲ.
ಎಲ್ಲರೂ ಹೊರಗಿನವರೇ..!
ಇಲ್ಲಿ ಸೊಲ್ಲಾಪುರದವರನ್ನು ಮುಖ್ಯ ಭಾಷಣಕಾರರನ್ನಾಗಿ ಆಮಂತ್ರಿಸಲಾಗಿತ್ತು, ಇದರ ಜೊತೆಗೆ ಮುಂಬಯಿಯ ೭ ಜನ ಪ್ರಾರ್ಥನೆ ಹೇಳುವವರನ್ನು ಕರೆಯಿಸಲಾಗಿತ್ತು, ದಿ. ೫ ರಂದು ನಡೆಯುವ ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಎಂದು ಹೇಳಲಾಗಿತ್ತು, ಆದರೆ ಇದರ ಬಗ್ಗೆ ಖಾಸಗಿಯಾಗಿ ಪ್ರಚಾರ ಮಾಡಿ ಕರೆಯಿಸುವ ಕೆಲಸ ವ್ಯವಸ್ಥಿತವಾಗಿ ನಡೆದಿತ್ತು.
ಶೋಷಿತರೇ ಟಾರ್ಗೆಟ್..!
ಈ ಎರಡೂ ದಿನದ ಕಾರ್ಯಕ್ರಮಕ್ಕೆ ಶೋಷಿತ ಲಿಂಗಾಯತರನ್ನೇ ಟಾರ್ಗೆಟ್ ಮಾಡಲಾಗಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.
ಮೂಲಗಳ ಪ್ರಕಾರ ೮೫೦ ಜನ ಈ ಕಾರ್ಯಕ್ರಮಕ್ಕೆ ಹೆಸರು ನೋಂದಾಯಿಸಿದ್ದರು. ಆದರೆ ಪೊಲೀಸರ ಸಕಾಲಿಕ ಮಧ್ಯಪ್ರವೇಶದಿಂದ ಕಾರ್ಯಕ್ರಮ ರದ್ದಾಯಿತು.