ಬೆತ್ತಲೆ ಫೋಟೋ ವಿವಾದ- ನಟ ರಣವೀರ್ ಸಿಂಗ್ ವಿಚಾರಣೆ ವೇಳೆ ಶಾಕಿಂಗ್ ಹೇಳಿಕೆ

Advertisement

ಬಾಲಿವುಡ್ ನಟ ರಣವೀರ್ ಸಿಂಗ್ ಅಮೆರಿಕದ ನಟ ಬರ್ಟ್ ರೆನಾಲ್ಡ್ಸ್ ಅವರಿಗೆ ಗೌರವ ಸೂಚಿಸುವ ಸಲುವಾಗಿ ಮ್ಯಾಗಝೀನ್ವೊಂದರ ಫೋಟೋಶೂಟ್ನ ಲ್ಲಿ ಬೆತ್ತಲೆಯಾಗಿದ್ದರು. ಆ ಫೋಟೋಶೂಟ್ನ ಫೋಟೋಗಳನ್ನು ಸೋಷಿಯಲ್ ಮೀಡಿಯಾ ದಲ್ಲೂ ರಣವೀರ್ ಹಂಚಿಕೊಂಡಿದ್ದರು.

ಬಳಿಕ ಅದು ವಿವಾದದ ಸ್ವರೂಪ ಪಡೆದುಕೊಂಡಿತ್ತು. ಸಾಕಷ್ಟು ಜನರು ರಣವೀರ್ ಫೋಟೋಗಳಿಗೆ ನೆಗೆಟಿವ್ ಪ್ರತಿಕ್ರಿಯೆ ನೀಡಿದ್ದರು. ಜುಲೈ 26ರಂದು ಐಪಿಸಿ ಸೆಕ್ಷನ್ 509, 292, 294 ಹಾಗೂ ಐಟಿ ಕಾಯ್ದೆಯ ಸೆಕ್ಷನ್ 67ಎ ಅಡಿಯಲ್ಲಿ ರಣ್ವೀರ್ ಸಿಂಗ್ ವಿರುದ್ಧ ಮುಂಬೈನ ಚೆಂಬೂರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಈ ಸಂಬಂಧ ವಿಚಾರಣೆಗೆ ಒಳಪಟ್ಟಿದ್ದ ರಣವೀರ್ ‘ವೈರಲ್ ಆಗಿರುವ ಫೋಟೋಗಳಲ್ಲಿ ಒಂದು ಫೋಟೋ ನನ್ನದಲ್ಲ’ ಎಂದಿದ್ದಾರೆ.