ಬೆಂಗಳೂರು- ಚೆನ್ನೈ ಎಕ್ಸ್​ಪ್ರೆಸ್​ವೇ ವೈಮಾನಿಕ ಪರಿಶೀಲನೆ ನಡೆಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

Advertisement

ಬೆಂಗಳೂರು: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಗುರುವಾರ ಬೆಂಗಳೂರು- ಚೆನ್ನೈ ಎಕ್ಸ್ ಪ್ರೆಸ್ ವೇ ಕಾಮಗಾರಿ ಪ್ರಗತಿಯನ್ನು ಪರಿಶೀಲಿಸಿದರು.
262 ಕಿಲೋ ಮೀಟರ್ ಉದ್ದದ ಅಷ್ಟಪಥ ಹೆದ್ದಾರಿ ಕಾಮಗಾರಿಯನ್ನು 16, 730 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ನಿತಿನ್ ಗಡ್ಕರಿ ಇಂದು ವೈಮಾನಿಕ ಸಮೀಕ್ಷೆ ಮೂಲಕ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ಸಿ. ಸಿ. ಪಾಟೀಲ್ ಹಾಗೂ ಸಂಸದ ಮುನಿಸ್ವಾಮಿ ಉಪಸ್ಥಿತರಿದರು. ಗಂಟೆಗೆ 120 ಕಿಲೋ ಮೀಟರ್ ವೇಗಕ್ಕೆ ತಕ್ಕಂತೆ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದ್ದು, ಇದರಿಂದ ಬೆಂಗಳೂರು ಮತ್ತು ಚೆನ್ನೈ ನಡುವಣ ದೂರ 3000 ಕಿಲೋ ಮೀಟರ್ ನಿಂದ 262 ಕಿಲೋ ಮೀಟರ್ ಗೆ ಕಡಿಮೆಯಾಗಲಿದೆ. ಈ ಯೋಜನೆಯಿಂದ ವಾಹನಗಳ ದಕ್ಷತೆಯ ವೆಚ್ಚ ಮತ್ತು ಇಂಧನ ಬಳಕೆ ಕಡಿಮೆಯಾಗಲಿದ್ದು, ಬೆಂಗಳೂರು ಮತ್ತು ಚೆನ್ನೈ ನಡುವಣ ಆರ್ಥಿಕ ಚಟುವಟಿಕೆ ಗರಿಗೆದರಿದೆ. ಕರ್ನಾಟಕ ಮತ್ತು ಆಂಧ್ರಪ್ರದೇಶದ ಕೈಗಾರಿಕಾ ಹಬ್ ಗಳನ್ನು ಚೆನ್ನೈ ಬಂದರು ಜೊತೆಗೆ ಸಂಪರ್ಕ ಕಲ್ಪಿಸಲಿದೆ.