ಬಾಗಲಕೋಟೆ: ಹುನಗುಂದ ತಾಲೂಕು ಕಮತಗಿ ಐಬಿ ಚೆಕ್ಪೋಸ್ಟ್ ಹತ್ತಿರ ಆಗಮಿಸುತ್ತಿದ್ದ ಇಂಡಿಕಾ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಕಾರು ಸುಟ್ಟು ಕರಕಲವಾಗಿರುವ ಘಟನೆ ಗುರುವಾರ ಸಂಜೆ 7.30ರ ಸುಮಾರಿಗೆ ಜರುಗಿದೆ. ಕಾರಿನಲ್ಲಿದ್ದವರು ಸುರಕ್ಷಿತವಾಗಿ ಆಚೆ ಬಂದಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.