ಬೀಫ್ ಬಿರಿಯಾನಿ ಹೋಟೆಲ್‌ಗೆ ದಾಳಿ

DUM BIRIYANIo
Advertisement

ಮಂಗಳೂರು: ಹೋಟೆಲ್‌ನಲ್ಲಿ ಬೀಫ್ ಬಿರಿಯಾನಿ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಹರಿದಾಡುತ್ತಿದ್ದ ಹಿನ್ನೆಲೆಯಲ್ಲಿ ಮುಡಿಪು ಸಮೀಪದ ತಾಜ್ ಕ್ಯಾಂಟೀನ್ ಎಂಬ ಹೋಟೆಲ್‌ಗೆ ಕೊಣಾಜೆ ಪೊಲೀಸರು ಮಂಗಳವಾರ ದಾಳಿ ನಡೆಸಿದ್ದಾರೆ.
ಪರಿಶೀಲನೆಯ ವೇಳೆ ದನದ ಮಾಂಸದ ಬಿರಿಯಾನಿ ಮತ್ತು ಮಾಂಸ ಪತ್ತೆಯಾಗಿದೆ. ಈ ಹೋಟೆಲ್ ಮಾಲೀಕ ಹುಸೈನ್ ಎಂಬವವರನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳೀಯ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ನೀಡಿದ ಮಾಹಿತಿಯಂತೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದು, ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಕೂಡಾ ಪೊಲೀಸರ ಜೊತೆಗಿದ್ದರು.