ನವದೆಹಲಿ: ಜೆಡಿಎಸ್ ಮಾಜಿ ಶಾಸಕ ಎ.ಟಿ ರಾಮಸ್ವಾಮಿ ಇಂದು ಬಿಜೆಪಿ ಸೇರ್ಪಡೆಯಾದರು.
ದೆಹಲಿಯ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಸದಸ್ಯತ್ವ ರಸೀದಿ ನೀಡಿ, ಶಾಲು ಹೊದಿಸಿ ಅವರನ್ನು ಪಕ್ಷಕ್ಕೆ ಬರ ಮಾಡಿಕೊಂಡರು.
ಈ ವೇಳೆ ಮಾತನಾಡಿದ ಎ.ಟಿ ರಾಮಸ್ವಾಮಿ, ಸಂತೋಷದಿಂದ ಪಕ್ಷವನ್ನು ಸೇರಿದ್ದೇನೆ. ಆದರೆ ನಾನು ಶಾಸಕ ಸ್ಥಾನದ ಆಕ್ಷಾಂಕ್ಷಿಯಲ್ಲ, ಪಕ್ಷ ಅವಕಾಶ ಕೊಟ್ಟರೆ ಸಣ್ಣ ಕಪ್ಪು ಚುಕ್ಕೆ ಇಲ್ಲದೆ ಕೆಲಸ ಮಾಡುವೆ. ಜನ, ರಾಜ್ಯ, ದೇಶದ ಜನರ ಹಿತಾಸಕ್ತಿಗಾಗಿ ಕೆಲಸ ಮಾಡುವೆ. ವಿಧಾನಸಭೆಗಳು ಹಣದ ಧ್ವನಿಯಾಗುತ್ತಿವೆ. ಅವು ಬಡವರ ಪರ ಧ್ವನಿಯಾಗಬೇಕಾಗಿದೆ ಎಂದರು.